ಸೋಮವಾರಪೇಟೆ, ಸೆ. 29: ಇಲ್ಲಿನ ಚೌಡ್ಲು ಕೃಷಿ ಪತ್ತಿನ ಸಹಕಾರ ಸಂಘ 2018-19ರ ಸಾಲಿನಲ್ಲಿ ರೂ. 21.96 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಟಿ. ಪರಮೇಶ್ ಹೇಳಿದರು.
ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ 2,550 ಸದಸ್ಯರಿದ್ದು, ರೂ. 224.29 ಲಕ್ಷ ಪಾಲು ಬಂಡವಾಳ ಹೊಂದಿದೆ. ಪ್ರಸಕ್ತ ಸಾಲಿನಲ್ಲಿ ಸದಸ್ಯರುಗಳಿಗೆ ರೂ. 2227.49 ಲಕ್ಷಗಳ ಸಾಲ ನೀಡಲಾಗಿದೆ, ಸದಸ್ಯರಿಗೆ ಶೇ. 6 ಡಿವಿಡೆಂಡ್ ನೀಡಲಾಗುವದು ಎಂದರು.
ಸದಸ್ಯರು ಸರಿಯಾದ ಸಮಯಕ್ಕೆ ಸಾಲ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಮುಂದಾಗಬೇಕು. ಕಷ್ಟ ದಿನಗಳಲ್ಲಿ ರೈತರಿಗೆ ಸಹಾಯ ಮಾಡುವದೇ ಸಹಕಾರಿ ಸಂಘಗಳಾಗಿದ್ದು, ಇದನ್ನು ಬಲವರ್ಧನೆಗೊಳಿಸಬೇಕು ಎಂದು ಸದಸ್ಯರುಗಳಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಕೆ.ವಿ. ಜಾನಕಿ, ನಿರ್ದೇಶಕರಾದ ಎಲ್.ಜಿ. ಮದನ್, ವೈ.ಎಂ. ನಾಗರಾಜು, ಕೆ.ಪಿ. ಭಾನುಪ್ರಕಾಶ್, ಡಿ.ಸಿ. ರಾಜು, ಕೆ.ಎಸ್. ವಿಜಯ, ಹೆಚ್.ಎಲ್. ವಿಜೇಂದ್ರ, ಕವಿತ ವಿರೂಪಾಕ್ಷ, ಎಸ್.ಬಿ. ಈರಪ್ಪ ಉಪಸ್ಥಿತರಿದ್ದರು. ಡಿ.ಸಿ.ಸಿ. ಬ್ಯಾಂಕ್ನ ವ್ಯವಸ್ಥಾಪಕರಾದ ಎಸ್. ಎಂ. ಭರತ್, ಸಂಘದ ಮೇಲ್ವಿಚಾರಕರಾದ ಎಂ.ಜೆ. ಜಯಪ್ರಕಾಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈ.ಪಿ. ಹರೀಶ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.