ಮಡಿಕೇರಿ, ಸೆ. 29 : ಕೊಡವ ಸಮಾಜಗಳ ಒಕ್ಕೂಟದ ಮಹಾ ಸಭೆಯು ಸಮಾಜದ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ಬಾಳುಗೋಡುವಿನ ಕೊಡವ ಸಮಾಜದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಷ್ಣುಕಾರ್ಯಪ್ಪ, ಕೊಡವ ಸಮಾಜಗಳ ನಡುವಿನ ಹಾಕಿ ಪಂದ್ಯಾವಳಿಗೆ ಚಾಲನೆ ದೊರೆಯಲಿದೆ ಎಂದರು.

ಅ.12 ರಂದು ಯುದ್ಧ ಸ್ಮಾರಕದಲ್ಲಿ ಕೊಡಗಿನ ಹುತಾತ್ಮ ವೀರ ಯೋಧರಿಗೆ ಗೌರವ ನಮನ ಸಲ್ಲಿಸಲಾಗುತ್ತದೆ. ಅದೇ ದಿನ ಹಾಕಿ ಪಂದ್ಯದ ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಅ.13 ರಂದು ವಿವಿಧ ಕೊಡವ ಸಮಾಜಗಳ ನಡುವೆ ಕೊಡವ ಸಾಂಸ್ಕøತಿಕ ಸ್ಪರ್ಧೆಗಳು ನಡೆಯಲಿದೆ. ಅಲ್ಲದೆ ಅಂದು ಹಾಕಿ ಪಂದ್ಯದ ಫೈನಲ್ ಪಂದ್ಯ ನಡೆಯಲಿದ್ದು, ಸಂಜೆ ಬಹುಮಾನ ವಿತರಣೆ ನಡೆಯಲಿದೆ ಎಂದರು. ಸಮಾಜದ ಪೋಷಕ ಸದಸ್ಯರು ಹಾಗೂ ಮಾಜಿ ಸಚಿವ ಮೇರಿಯಂಡ ಸಿ. ನಾಣಯ್ಯ ಮಾತನಾಡಿ, ಕೊಡವ ಸಮಾಜಗಳ ಒಕ್ಕೂಟದ ಮಹಾ ಸಭೆಯಲ್ಲಿ ಪ್ರಸ್ತುತ ಇರುವ ಆಡಳಿತ ಮಂಡಳಿಯನ್ನು 3 ವರ್ಷಗಳ ಕಾಲ ಮುಂದುವರೆ ಯುವಂತೆ ಎಲ್ಲಾ ಕೊಡವ ಸಮಾಜ ತೀರ್ಮಾನಿಸಿರು ವದು ಸ್ವಾಗತಾರ್ಹ.

ಕೊಡಗಿನ ಎಲ್ಲಾ ಜನ ಪ್ರತಿನಿಧಿಗಳು ಕೊಡಗಿನಲ್ಲಿ ಯಾವದೇ ಸಮಸ್ಯೆ ಉದ್ಭವಿಸಿದಾಗ ಒಗ್ಗಟ್ಟಿನಿಂದ ಹೋರಾಡಬೇಕೆಂದು ಕರೆ ನೀಡಿದರಲ್ಲದೆ, ರಾಜ್ಯದ ಇತರ ಜಿಲ್ಲೆಗಳಲ್ಲಿ ಸಮಸ್ಯೆಗಳು ಉದ್ಭವಿಸಿದಾಗ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಸಂಘಟಿತರಾಗಿ ಪ್ರತಿಭಟಿಸುವಂತೆ ನಮ್ಮ ಜಿಲ್ಲೆಯಲ್ಲೂ ನಡೆಯುವಂತಾಗ ಬೇಕು ಎಂದರು. ಮುಂದಿನ ಎಲ್ಲಾ ಕೊಡವ ಕೌಟುಂಬಿಕ ಹಾಕಿ ನಮ್ಮೆಗಳು ಬಾಳುಗೋಡಿನ ಕೊಡವ ಸಮಾಜದ ಒಕ್ಕೂಟದ ಮೈದಾನದಲ್ಲಿ ನಡೆಯುವದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಕೊಡವ ಸಮಾಜಗಳ ಒಕ್ಕೂಟಗಳ ಹಾಕಿ ಮೈದಾನಕ್ಕೆ 5 ಕೋಟಿ ಹಾಗೂ ಸಮುದಾಯಕ್ಕೆ 10 ಕೋಟಿ ಅನುದಾನವನ್ನು ದೊರಕಿಸಿ ಕೊಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ್ದ ಕುಟುಂಬದ ಅಧ್ಯಕ್ಷ ಮುಕ್ಕಾಟೀರ ಉತ್ತಯ್ಯ ಅವರನ್ನು ಗೌರವಿಸಲು ತೀರ್ಮಾನಿಸ ಲಾಯಿತು. ಮುಂದಿನ ಸಾಲಿನ ಕೌಟುಂಬಿಕ ಹಾಕಿ ನಮ್ಮೆಯನ್ನು ಮುಕ್ಕಾಟೀರ (ಹರಿಹರ) ಕುಟುಂಬದವರು ನಡೆಸುವ ವಿಷಯವನ್ನು ಇದೇ ಸಂದರ್ಭ ಚರ್ಚಿಸಲಾಯಿತು.

ಪೊಮ್ಮಕ್ಕಡ ನಮ್ಮೆ : ಕೊಡವ ಸಮಾಜಗಳ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಪೊಮ್ಮಕ್ಕಡ ನಮ್ಮೆ ಅ. 11 ರಂದು ನಡೆಯಲಿದ್ದು, ನಮ್ಮೆಯಲ್ಲಿ ಮಹಿಳೆಯರಿಗೆ ಹೂ ಜೋಡಣೆ ಸ್ಪರ್ಧೆ, ತರಕಾರಿ ಮತ್ತು ಕಣ್ಣು ಹಂಪಲನ್ನು ಬಳಸಿ ಕಲಾಕೃತಿಗಳನ್ನು ರಚನೆ ಮಾಡುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಆಯೋಜಿತ ವಿವಿಧ ಸ್ಪರ್ಧೆಗಳಲ್ಲಿ ಪ್ರತಿ ಕೊಡವ ಸಮಾಜಗಳಿಂದÀ ತಲಾ ಓರ್ವ ಮಹಿಳೆ ಪಾಲ್ಗೊಳ್ಳಬಹುದೆಂದು ತೀರ್ಮಾನಿಸಲಾಗಿದ್ದು, ಆಸಕ್ತರು ಅ. 9ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9741213440, 9449765382 ಸಂಪರ್ಕಿಸಬಹು ದಾಗಿದೆ ಎಂದು ಒಕ್ಕೂಟದ ಅಧ್ಯಕ್ಷೆ ಚೆರಿಯಪಂಡ ಇಮ್ಮಿ ಉತ್ತಪ್ಪ ಕೋರಿದ್ದಾರೆ.

ಸಭೆಯಲ್ಲಿ ಕೊಡವ ಸಮಾಜಗಳ ಒಕ್ಕೂಟದ ಮಾಜಿ ಅಧ್ಯಕ್ಷರಾದ ಮಲ್ಲೇಂಗಡ ದಾದ ಬೆಳ್ಳಿಯಪ್ಪ, ಉಪಾಧ್ಯಕ್ಷÀ ಮಲಚ್ಚೀರ ಬೋಸ್, ಖಜಾಂಚಿ ಚೆರಿಯಪಂಡ ಕಾಶಿಯಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಜಂಟಿ ಕಾರ್ಯದರ್ಶಿ ಕೋದಂಡ ಸನ್ನು ಉತ್ತಪ್ಪ ಹಾಗೂ ಎಲ್ಲಾ ಕೊಡವ ಸಮಾಜದ ಪದಾಧಿಕಾರಿ ಗಳು ಹಾಗೂ ಸದಸ್ಯರು ಮತ್ತು ಕೊಡವ ಸಮಾಜದ ಕುಟುಂಬಸ್ಥರು, ಹಾಜರಿದ್ದರು. ಉಳ್ಳಿಯಡ ಗಂಗಮ್ಮ ಪ್ರಾರ್ಥಿಸಿ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ನಿರೂಪಿಸಿದರು.