ಕುಶಾಲನಗರ, ಸೆ. 28: ಸರಕಾರಿ ನೌಕರನೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕುಶಾಲನಗರದ ಕೆಎಚ್‍ಬಿ ಕಾಲೋನಿಯಲ್ಲಿ ನಡೆದಿದೆ.
ನೀರಾವರಿ ನಿಗಮ ಸಿಬ್ಬಂದಿ ಇಗ್ನಿಶ್ ಮ್ಯಾಥ್ಯು (39) ಮೃತರು. ಕೆಎಚ್‍ಬಿ ಕಾಲೋನಿಯ ವಸತಿಗೃಹದಲ್ಲಿ ವಾಸವಿದ್ದ ಮ್ಯಾಥ್ಯು ಪತ್ನಿ ಮನೆಯಲ್ಲಿ ಇಲ್ಲದ ಸಂದರ್ಭ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಘಟನೆಗೆ ಸಂಬಂಧಿಸಿ ದಂತೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.