ಮಡಿಕೇರಿ, ಸೆ. 28: ರಾಜ್ಯದ ಮುಜರಾಯಿ ಇಲಾಖಾಧೀನದ ದೇವಾಲಯಗಳ ಅಸ್ತಿತ್ವ ಸದ್ಯಕ್ಕೆ ಮುಂದುವರಿದಿದೆ. ಎಲ್ಲ ಸಮಿತಿಗಳನ್ನು ವಿಸರ್ಜನೆ ಮಾಡಿರುವದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆದೇಶÀ ಹೊರಡಿಸಿದ್ದರು. ಆದೇಶದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿ ಮುಖ್ಯಮಂತ್ರಿಯವರು ತಾ. 20 ರಂದು ಮುಜರಾಯಿ ಇಲಾಖಾ ಆಯುಕ್ತರಿಗೆ ನಿರ್ದೇಶನದ ಟಿಪ್ಪಣಿ ಕಳುಹಿಸಿದ್ದರು.ಇಲಾಖಾ ಆಯುಕ್ತರು ಇನ್ನೂ ಅಧಿಕೃತ ಆದೇಶ ಹೊರಡಿಸದಿರುವದರಿಂದ ಸಮಿತಿಗಳ ಅಸ್ತಿತ್ವ ಮುಂದುವರಿದಿರುವದು “ಶಕ್ತಿ” ಯ ಗಮನಕ್ಕೆ ಬಂದಿದೆ. ಅಲ್ಲದೆ, ಈ ಕುರಿತಾಗಿ ಜಿಲ್ಲಾಧಿಕಾರಿಯವರ ಕಚೇರಿಗೂ ಯಾವದೇ ಆದೇಶÀ ಇದುವರೆಗೆ ಬಂದಿಲ್ಲ ಎಂಬದು ಖಾತರಿಗೊಂಡಿದೆ.ಮುಖ್ಯಮಂತ್ರಿಯವರು ತಮ್ಮ ಟಿಪ್ಪಣಿಯಲ್ಲಿ ಹೀಗೆ ಉಲ್ಲೇಖಿಸಿದ್ದರು:-“ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ರಾಜ್ಯದ ಎಲ್ಲಾ ಮಾದರಿಯ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ಈ ಹಿಂದಿನ ಸರಕಾರದ ಅವಧಿಯಲ್ಲಿ ನೇಮಕ ಮಾಡಲಾದ ಎಲ್ಲಾ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಸದಸ್ಯರುಗಳ ನಾಮ ನಿರ್ದೇಶನಗಳನ್ನು, ಸದಸ್ಯತ್ವವÀನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಸದರಿ ದೇವಸ್ಥಾನಗಳ ಆಡಳಿತವನ್ನು ಸಂಬಂಧಪಟ್ಟ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಈ ಕೂಡಲೇ ವಹಿಸಿಕೊಳ್ಳಲು ತುರ್ತು ಅಗತ್ಯ ಕ್ರಮ ಕೈಗೊಳ್ಳ್ಳುವಂತೆ ಸೂಚಿಸಿದೆ” ಎಂದು ಆದೇೀಶದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದಾಗಿ ಈಗಾಗಲೇ ತಯಾರಿಯಲ್ಲಿರುವ ತಲಕಾವೇರಿ ಜಾತ್ರೆಯಲ್ಲಿ ಸಮಿತಿಯ ಪಾತ್ರವೇನು ಎಂದು “ಶಕ್ತಿ” ತಿಳಿಯ ಬಯಸಿದಾಗ ವ್ಯವಸ್ಥಾಪನಾ ಸಮಿತಿ ಪ್ರಮುಖರು ಈ ಬಗ್ಗೆ ಯಾವದೇ ಮುಜುಗರಕ್ಕೆ ಒಳಗಾಗದೆ ಜಾತ್ರಾ ಸಿದ್ಧತೆಯಲ್ಲ್ಲಿ ತೊಡಗಿಸಿ ಕೊಂಡಿರುವದು “ಶಕ್ತಿ” ಯ ಗಮನಕ್ಕೆ ಬಂದಿದೆ. ಅಲ್ಲದೆ, ಮಡಿಕೇರಿ ಶ್ರೀ ಓಂಕಾರೇಶ್ವರ ಸಮಿತಿಯಾಗಲಿ, ಪಾಡಿ ಶ್ರೀ ಇಗ್ಗುತಪ್ಪ ಸಮಿತಿಯಾಗಲಿ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದ್ದು ಅದನ್ನು ಮುಂದುವರಿಸುವದಾಗಿ ಆಯಾ ಸಮಿತಿಯ ಪ್ರಮುಖರು ಸ್ಪಷ್ಟಪಡಿಸಿದ್ದಾರೆ. ಜಿಲ್ಲಾಡಳಿತಕ್ಕೂ ಯಾವದೇ ಆದೇಶ ಬಾರದಿರುವದರಿಂದ ಎಂದಿನಂತೆ ಸಮಿತಿಗಳ ಮೂಲಕ ಕಾರ್ಯ ನಿರ್ವಹಣೆಗೆ ಯಾವದೇ ಅಡ್ಡಿಪಡಿಸಿಲ್ಲ.

ದೇವಾಲಯ ವ್ಯವಸ್ಥಾಪನಾ ಸಮಿತಿಗಳ ಪ್ರÀಮುಖರ ಅನಿಸಿಕೆಯಂತೆ ಈ ಹಿಂದೆಯೂ ಬೇರೆ ಸರಕಾರವಿದ್ದಾಗ ಆಗಿನ ಕೆಲವು ಸಮಿತಿಗಳನ್ನು

(ಮೊದಲ ಪುಟದಿಂದ) ವಿ¸ರ್ಜಿಸಿದ್ದರೂ ರಾಜ್ಯ ಉಚ್ಚÀ ನ್ಯಾಯಾಲಯದಲ್ಲಿ ಆಗಿನ ವಿವಿಧೆಡೆಯ ಸಮಿತಿಗಳ ಪ್ರಮುಖರು ಸರಕಾರದ ನಿರ್ಧಾರದ ವಿರುದ್ಧ ಅರ್ಜಿ ಸಲ್ಲಿಸಿ ನ್ಯಾಯಾಲಯವು ಸಮಿತಿಗಳನ್ನು ಯಥಾವತ್ತಾಗಿ ಮುಂದುವರಿಸುವಂತೆ ಮಹತ್ವದ ತೀರ್ಪು ನೀಡಿತ್ತು. ಅಲ್ಲದೆ, ಸಮಿತಿ ಪ್ರಮುಖರನ್ನು ಸರಕಾರ ನೇಮಿಸುವಾಗ ಅವರ ಎಲ್ಲ ಹಿನ್ನೆಲೆಗಳನ್ನು ಜಿಲ್ಲ್ಲಾಡಳಿತದ ಮೂಲಕ ಪಡೆದುಕೊಂಡೇ ಮಾಡುವದರಿಂದ ವ್ಯಕ್ತಿಗತವಾಗಿ ತಕರಾರು ತೆಗೆದು ಅಂತಹವರನ್ನು ಕಾನೂನಾತ್ಮಕವಾಗಿ ಬದಲಾಯಿಸುವಂತಿಲ್ಲ. ಈ ಹಿಂದಿನ ಆದೇಶದ ಅನ್ವಯ ಮೂರು ವರ್ಷಗಳವರೆಗೆ ಆಯಾ ಸಮಿತಿಗಳ ಅಧಿಕಾರಾವಧಿಯಿದ್ದು ಈಗಲೂ ಎಂದಿನಂತೆ ಮುಂದುವರಿಯುತ್ತದೆ. ಇದನ್ನೂ ಮೀರಿ ಸರಕಾರ ಈಗಿನ ಸಮಿತಿಗಳನ್ನು ವಿಸರ್ಜಿಸಿದರೆ ನ್ಯಾಯ ರೀತಿಯಲ್ಲಿ ಅಸ್ತಿತ್ವವನ್ನು ಉಳಿಸಿಕೊಳ್ಳಲು ನ್ಯಾಯಾಲಯದ ಮೊರೆ ಹೋಗಲಾಗುತ್ತದೆ ಎಂದು ಪದಾಧಿಕಾರಿಗಳು “ಶಕ್ತಿ”ಯೊಂದಿಗೆ ವಿಶ್ವಾಸದ ನುಡಿಯಾಡಿದ್ದಾರೆ.