ಮಡಿಕೇರಿ, ಸೆ. 28: ಐದು ದಶಕಗಳಿಂದ ಮಡಿಕೇರಿಯ ಐತಿಹಾಸಿಕ ಕೋಟೆ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಾತ್ಮ ಗಾಂಧಿ ಜಿಲ್ಲಾ ಕೇಂದ್ರ ಗ್ರಂಥಾಲಯ ನಗರದ ಕೈಗಾರಿಕಾ ಬಡಾವಣೆಯ ಸರಕಾರಿ ಮುದ್ರಣಾಲಯ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲು ತಯಾರಿ ನಡೆದಿದೆ. ಆ ದಿಸೆಯಲ್ಲಿ ಇಲ್ಲಿನ ಸರಕಾರಿ ಮುದ್ರಣಾಲಯಕ್ಕೆ ಹೊಂದಿ ಕೊಂಡಿರುವ ಕಟ್ಟಡಕ್ಕೆ ಕಾಯಕಲ್ಪ ನೀಡಲಾಗುತ್ತಿದೆ.ಪ್ರಸಕ್ತ ಮಹಾತ್ಮ ಗಾಂಧಿ ಜಿಲ್ಲಾ ಕೇಂದ್ರ ಗ್ರಂಥಾಲಯ ಸಹಿತ; 5 ಶಾಖೆಗಳು ಜಿಲ್ಲೆಯಲ್ಲಿ ಕಾರ್ಯನಿರ್ವ ಹಿಸುವದರೊಂದಿಗೆ; ಒಟ್ಟಾರೆ ಅಂದಾಜು 4 ಲಕ್ಷದಷ್ಟು ಗ್ರಂಥಗಳ ಭಂಡಾರ ಹೊಂದಿರುವ ದಾಗಿ ಮಾಹಿತಿ ಲಭಿಸಿದೆ. ಮಾತ್ರ ವಲ್ಲದೆ ಕೊಡಗಿನ 98 ಗ್ರಾ.ಪಂ.ಗಳಲ್ಲಿ ಕೂಡ ಸಾರ್ವಜನಿಕರಿಗಾಗಿ ಗ್ರಂಥಗಳನ್ನು ಕಲ್ಪಿಸಿ ಓದುವ ವ್ಯವಸ್ಥೆ ಮಾಡಲಾಗಿದೆ.ಮಕ್ಕಳ ಗ್ರಂಥಾಲಯ: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ; ಮಕ್ಕಳ ಗ್ರಂಥಾಲಯ ಕೂಡ ಕಾರ್ಯನಿರ್ವಹಿಸುತ್ತಿದ್ದು; ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕ ಸಾಹಿತ್ಯ ಒದಗಿಸಲಾಗುತ್ತಿದೆ. ಕೊಡಗು ಗುಡ್ಡಗಾಡು ಪ್ರದೇಶವಾಗಿರುವ ಹಿನ್ನೆಲೆ ದೂರದ ಹಳ್ಳಿಗಳಿಂದ ಬರುವವರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿರುವದು ವಾಸ್ತವ.

ಸಂಚಾರಿ ಗ್ರಂಥಾಲಯ ಇಲ್ಲ : ಒಂದೊಮ್ಮೆ ಇಂತಹ ಗ್ರಾಮೀಣ ಓದುಗರ ಅಭಿರುಚಿ ಹೆಚ್ಚಿಸುವ ದಿಸೆಯಲ್ಲಿ; ಜ್ಞಾನ ಭಂಡಾರ ಹೊತ್ತ ವಾಹನವೊಂದು ನಿರಂತರ ಓಡಾಟದೊಂದಿಗೆ ಹಳ್ಳಿಕಟ್ಟೆಯ ಮಂದಿಗೂ ತಲಪಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಆ ನಂತರದ ದಿನಗಳಲ್ಲಿ ಈ ವಾಹನ ಶಿಥಿಲಗೊಂಡು ಸಂಚಾರಿ ಗ್ರಂಥಾಲಯವೂ ಸ್ಥಗಿತಗೊಳ್ಳು ವಂತಾಯಿತು.ಅಲೆಮಾರಿ ಗ್ರಂಥಾಲಯ: ಈ ನಡುವೆಯೂ ಕೊಡಗಿನ ತೀರ್ಥಕ್ಷೇತ್ರ ಭಾಗಮಂಡಲ ವ್ಯಾಪ್ತಿಯ ಕೋರಂಗಾಲ ಶಾಲಾ ಆವರಣದಲ್ಲಿ ‘ಅಲೆಮಾರಿ ಗ್ರಂಥಾಲಯ’ ಕೂಡ ಅಸ್ತಿತ್ವದಲ್ಲಿದ್ದು; ದೂರದ ಊರು ಗಳಿಂದ ಬರುವ ಯಾತ್ರಾರ್ಥಿಗಳು ಹಾಗೂ ಇತರರಿಗೆ ಅನುಕೂಲ ಕಲ್ಪಿಸುವ ದಿಸೆಯಲ್ಲಿ ಕಾರ್ಯನಿರ್ವ ಹಿಸುತ್ತಿದೆ. ಇನ್ನುಳಿದಂತೆ ಮಡಿಕೇರಿಯ ಎ.ವಿ. ಶಾಲೆ ಬಳಿ ಒಂದು ಗ್ರಂಥಾಲಯ ಶಾಖೆಯಿದ್ದು; ಇತರೆಡೆ ಕುಶಾಲನಗರ, ವೀರಾಜಪೇಟೆ, ಸೋಮವಾರಪೇಟೆ ಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಈ ಎಲ್ಲೆಡೆ ಪ್ರಮುಖ ದೈನಿಕಗಳ ಸಹಿತ ಇತರ ಪತ್ರಿಕೆಗಳು, ವಿವಿಧ ಗ್ರಂಥಗಳು ಓದುಗರಿಗೆ ನಿತ್ಯ ತಮ್ಮ ಜ್ಞಾನಾರ್ಜನೆಗೆ ಲಭಿಸಲಿವೆ.

ಗ್ರಂಥಗಳು ಲಭ್ಯ: ಗ್ರಂಥಾಲಯ ಗಳಲ್ಲಿ ನಿತ್ಯವೂ ಓದುಗರ ಜ್ಞಾನಾರ್ಜನೆಗೆ ಹೊಸ ಹೊಸ ಗ್ರಂಥಗಳು ಲಭಿಸಲಿದ್ದು; ಸರಸ್ವತಿಯ ಜ್ಞಾನ ಭಂಡಾರ ತುಂಬುತ್ತಲ್ಲೇ ಇದೆ. ಈ ಸಲುವಾಗಿ ಕರ್ನಾಟಕದ ರಾಜಧಾನಿ ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಪ್ರತಿಹಂತದಲ್ಲಿ ಮುದ್ರಣಗೊಳ್ಳುವ ಹೊಸ ಹೊಸ ಸಾಹಿತ್ಯಗಳು, ಜಿಲ್ಲೆಯ ಗ್ರಂಥಾಲಯಗಳಿಗೆ ಸೇರ್ಪಡೆಗೊಂಡು ಓದುಗರಿಗೆ ಲಭಿಸುವಂತಾಗಿದೆ.

ಕೋಲ್ಕತ್ತಾದಿಂದ : ದೂರದ ಕೋಲ್ಕತ್ತಾದಿಂದ ಅಲ್ಲಿನ ರಾಜಾರಾಂ ಮೋಹನ್ ರಾಯ್ ಪ್ರತಿಷ್ಠಾನವು; ನಮ್ಮ ಜಿಲ್ಲೆಗೆ ನಿರಂತರವಾಗಿ ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿ ಪ್ರಕಟಿತ ಸಾಹಿತ್ಯಗಳನ್ನು ಸರಬರಾಜು ಗೊಳಿಸುತ್ತಾ ಬಂದಿದೆ.

ಸ್ಥಳೀಯ ಸಾಹಿತ್ಯ : ಇಂತಹ ರಾಷ್ಟ್ರೀಯ ವಿಚಾರ ಮಾಲಿಕೆ ಗಳೊಂದಿಗೆ; ಕರುನಾಡಿನ ಸಾಹಿತ್ಯಗಳು

(ಮೊದಲ ಪುಟದಿಂದ) ಸೇರ್ಪಡೆಗೊಂಡು; ಕೊಡಗಿನ ಸಾಹಿತ್ಯ ಗ್ರಂಥಗಳು ಕೂಡ ಈ ಜ್ಞಾನ ಭಂಡಾರದೊಳಗೆ ಸಂಗಮ ಗೊಂಡಿರುವದು ಕಾಣಬರುತ್ತದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಅರೆಭಾಷೆ ಸಾಹಿತ್ಯ ಅಕಾಡೆಮಿಗಳ ಪ್ರಕಟಣೆಗಳೊಂದಿಗೆ; ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತಿತರ ಪ್ರಕಟಣೆಗಳು ಕೂಡ ಓದುಗರಿಗೆ ದೊರಕುವಂತಾಗಿದೆ.

ಸ್ಥಳಾಂತರ ಅನಿವಾರ್ಯ : ಇಂತಹ ಸರಸ್ವತಿಯ ಜ್ಞಾನ ಭಂಡಾರ ದಿಂದ ಕೂಡಿರುವ ಮಹಾತ್ಮಗಾಂಧಿ ಜಿಲ್ಲಾ ಕೇಂದ್ರ ಗ್ರಂಥಾಲಯವು ಮುಂದಿನ ದಿನಗಳಲ್ಲಿ ಅನಿವಾರ್ಯ ವಾಗಿ ಇಲ್ಲಿನ ಕೈಗಾರಿಕಾ ಬಡಾವಣೆಯ ಕಟ್ಟಡಕ್ಕೆ ಸ್ಥಳಾಂತರ ಗೊಳ್ಳಲಿದೆ. ಕಾರಣ ಈಗಾಗಲೇ ಕೋಟೆ ಆವರಣ ದಲ್ಲಿರುವ ಎಲ್ಲಾ ಕಟ್ಟಡಗಳ ಆಡಳಿತ ವನ್ನು ಬೇರೆಡೆಗೆ ಸ್ಥಳಾಂತರ ಗೊಳಿಸುವಂತೆ ರಾಜ್ಯ ಉಚ್ಛ ನ್ಯಾಯಾಲಯ ಆದೇಶಿಸಿದೆ. ಆ ಮೇರೆಗೆ ಸಂಬಂಧಿಸಿದವರು ತಯಾರಿ ನಡೆಸುತ್ತಿದ್ದಾರೆ.

-ಶ್ರೀಸುತ