ಗೋಣಿಕೊಪ್ಪಲು, ಸೆ.27: ಜಾನಪದ ಪರಿಷತ್ ದ.ಕೊಡಗು ಘಟಕದ ವತಿಯಿಂದ ಮಡಿಕೇರಿಯಲ್ಲಿ ನಡೆಯುವ ದಸರಾ ಜನೋತ್ಸವದ ‘ಜಾನಪದ ಉತ್ಸವ 2019ರ ಕಾರ್ಯಕ್ರಮಕ್ಕೆ 3 ಜಾನಪದ ಕಾರ್ಯಕ್ರಮಗಳನ್ನು ನೀಡುವಂತೆ ಸಭೆಯು ನಿರ್ಣಯ ಕೈಗೊಂಡಿತು.
ಗೋಣಿಕೊಪ್ಪಲು, ಸೆ.27: ಜಾನಪದ ಪರಿಷತ್ ದ.ಕೊಡಗು ಘಟಕದ ವತಿಯಿಂದ ಮಡಿಕೇರಿಯಲ್ಲಿ ನಡೆಯುವ ದಸರಾ ಜನೋತ್ಸವದ ‘ಜಾನಪದ ಉತ್ಸವ 2019ರ ಕಾರ್ಯಕ್ರಮಕ್ಕೆ 3 ಜಾನಪದ ಕಾರ್ಯಕ್ರಮಗಳನ್ನು ನೀಡುವಂತೆ ಸಭೆಯು ನಿರ್ಣಯ ಕೈಗೊಂಡಿತು.
ಕಲೆ, ಸಂಸ್ಕøತಿ ಹಾಗೂ ಡಾ.ಆಶಿಕ್ ಚಂಗಪ್ಪ ಅವರ ಮಿಮಿಕ್ರಿ ಕಾರ್ಯಕ್ರಮವನ್ನು ಮಡಿಕೇರಿ ದಸರಾ ಜನೋತ್ಸವದಲ್ಲಿ ನಡೆಸುವಂತೆ ತೀರ್ಮಾನಿಸಿದರು.
ಸಮಿತಿಯ ಉಪಾಧ್ಯಕ್ಷರಾದ ಜಯಲಕ್ಷ್ಮಿ ಜ್ಯುವೆಲ್ಲರಿ ಮಾಲೀಕ ಎಂ.ಜಿ.ಮೋಹನ್ ಮಾತನಾಡಿ ಜಾನಪದವನ್ನು ಉಳಿಸುವ ನಿಟ್ಟಿನಲ್ಲಿ ಮಡಿಕೇರಿ ದಸರಾದಲ್ಲಿ ಕಾರ್ಯಕ್ರಮ ನೀಡಲು ಅವಕಾಶ ಲಭ್ಯವಾಗಿದೆ. ಆದ್ದರಿಂದ ಈ ನಾಡಿನ ಕಲೆ ಸಂಸ್ಕøತಿಯನ್ನು ಬಿಂಬಿಸುವ ಸಲುವಾಗಿ ಕಾರ್ಯಕ್ರಮವನ್ನು ಆಯ್ಕೆ ಮಾಡಿದ್ದೇವೆ ಎಂದರು. ಸಭೆಯಲ್ಲಿ ಜಾನಪದ ಪರಿಷತ್‍ನ ಉಪಾಧ್ಯಕ್ಷರಾದ ಪ್ರವೀಣ್ ಉತ್ತಪ್ಪ, ಬಿ.ಎನ್.ಪ್ರಕಾಶ್, ಆಶಿಕ್ ಚಂಗಪ್ಪ, ರೀಟಾ ದೇಚಮ್ಮ, ಎಸ್.ಎಂ. ರಜನಿ, ಖಜಾಂಜಿ ಜ್ಯೋತಿ, ಮನ ಕೆ.ಆರ್. ಉಪಸ್ಥಿತರಿದ್ದರು. ಪರಿಷತ್‍ನ ಪ್ರಧಾನ ಕಾರ್ಯದರ್ಶಿ ಗೀತಾನಾಯ್ಡು ಸ್ವಾಗತಿಸಿ ವಂದಿಸಿದರು.