ಭಾಗಮಂಡಲ, ಸೆ. 27: ಇಲ್ಲಿನ ಲ್ಯಾಂಪ್ಸ್ ಸಹಕಾರ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕೆ.ಕೆ. ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಬಳಿಕ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಸಂಘ ರೂ. 1.14 ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ. ಗಿರಿಜನ ಸದಸ್ಯರಿಗೆ ಅನುಕೂಲವಾಗುವಂತಹ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದೆ ಎಂದರು.
ಸಂಘದ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್. ಮೋಹನ್ ಮಾತನಾಡಿ, ಸದಸ್ಯರಿಗೆ ಸಂಘದಿಂದ ಸಾಲ ಪಡೆದುಕೊಳ್ಳಲು ಅವಕಾಶವಿದ್ದು, ಸಾಲಕ್ಕೆ ಸಂಬಂಧಿಸಿದಂತೆ ಸಂಘದ ಷರತ್ತಿಗೊಳಪಟ್ಟು ಸೂಕ್ತವಾದ ದಾಖಲೆಗಳನ್ನು ನೀಡಿ ಸಂಘದ ಸದಸ್ಯರು ಸಾಲದ ಪ್ರಯೋಜನವನ್ನು ಹೊಂದಿಕೊಳ್ಳಬಹುದು ಎಂದರು.
ಸಂಘದ ನಿರ್ದೇಶಕ ಕೆ.ಎ. ಮಿಟ್ಟು ರಂಜಿತ್ ಮಾತನಾಡಿ, ಸಂಘದೊಂದಿಗೆ ಬೈಲಾದಲ್ಲಿ ನಿಗದಿಪಡಿಸಿದಂತೆ ಕನಿಷ್ಟ ವ್ಯವಹಾರವನ್ನು ನಡೆಸಬೇಕು. ಇದರಿಂದ ಸಂಘ ಹಾಗೂ ಸದಸ್ಯರ ನಡುವೆ ಉತ್ತಮ ಬಾಂಧವ್ಯ ಬೆಳೆದು ಸಂಘವು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ಮಹಾಸಭೆಯಲ್ಲಿ ಸಂಘದ ಸದಸ್ಯರು ನಿರ್ದೇಶಕರು ಉಪಸ್ಥಿತರಿದ್ದರು.