ಕುಶಾಲನಗರ, ಸೆ. 28: ಕುಶಾಲನಗರದ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಆವರಣದಲ್ಲಿ ಅಧ್ಯಕ್ಷೆ ಸೆಲಿನಾ ಡಿ ಕುನ್ನ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಂಘದಲ್ಲಿರುವ ಕ್ಷೇಮನಿಧಿ, ಸರಕಾರದ ಕಲ್ಯಾಣ ನಿಧಿ, ಕಟ್ಟಡ ಮತ್ತು ಪೀಠೋಪಕರಣಗಳ ಸವಕಳಿ ನಿಧಿ, ಸಂಘದ ಸಿಬ್ಬಂದಿ ವರ್ಗದವರ ಭದ್ರತಾ ಠೇವಣಿ, ಭವಿಷ್ಯನಿಧಿ ಠೇವಣಿ, ಬೋನಸ್ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಮಹಾಸಭೆಯಲ್ಲಿ ಸಾರ್ವಜನಿಕ ವಲಯದಿಂದ ಗುರುತಿಸಲ್ಪಟ್ಟ ಮೂವರು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷೆ ಎನ್. ಎ. ಸುಶೀಲ, ನಿರ್ದೇಶಕರಾದ ನಳಿನಿ ನಂಜಪ್ಪ, ಟಿ.ಪಿ. ಜಯ, ಟಿ. ಕೆ. ಅಜಿತ ಕುಮಾರಿ, ಕಮಲ ಗಣಪತಿ, ನಿರ್ಮಲಾ ಶಿವದಾಸ್, ಹೆಚ್. ಡಿ. ಕಮಲಮ್ಮ, ಕಾರ್ಯದರ್ಶಿ ಬಿ.ಆರ್. ಶೈಲಕುಮಾರಿ ಮತ್ತು ಸದಸ್ಯರುಗಳು ಇದ್ದರು.