ಸಿದ್ದಾಪುರ, ಸೆ. 28: ವೀರಾಜಪೇಟೆಯಲ್ಲಿ ನಡೆದ ಜಿಲ್ಲಾಮಟ್ಟದ 3 ಕಿ.ಮೀ. ನಡಿಗೆ ಸ್ಪರ್ದೆಯಲ್ಲಿ ಸಿದ್ದಾಪುರ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ.ಎಸ್. ಐಶ್ವರ್ಯ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಐಶ್ವರ್ಯ ಕಕ್ಕಟ್ಟುಕಾಡು ನಿವಾಸಿ ಕೆ.ಕೆ. ಸದನ್ ಅವರ ಪುತ್ರಿ.