ಸಿದ್ದಾಪುರ, ಸೆ.28: ನೆಲ್ಯಹುದಿಕೇರಿ ನಿರಾಶ್ರಿತರಿಗೆ ನಿವೇಶನ ಮತ್ತು ಮನೆ ಒದಗಿಸುವ ಸಲುವಾಗಿ ಬೆಟ್ಟದಕಾಡು ಗ್ರಾಮದಲ್ಲಿ ನೆಲ್ಯಹುದಿಕೇರಿ ಮುಸ್ಲಿಂ ಜಮಾಅತ್ ಸಮಿತಿ ಅಧೀನದ ಸಹಾಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಮನೆ ನಿರ್ಮಾಣ ಕಾಮಗಾರಿಗೆ ಸಫ್‍ವಾನ್ ತಂಗಳ್ ಏಯ್‍ಮಲ ಶಂಕು ಸ್ಥಾಪನೆ ನೆರವೇರಿಸಿದರು. ಪದಾಧಿಕಾರಿಗಳಾದ ವಿ.ಕೆ ಇಸ್ಮಾಯಿಲ್ ಹಾಜಿ, ಒ.ಎ ಶಾಹುಲ್ ಹಾಜಿ, ವಿ.ಕೆ ಶಾಜಹಾನ್, ಎ.ಕೆ ತಸ್ಲೀಂ, ಪಿ.ಕೆ ನೌಫಲ್, ಎಂ.ಸಿ ಶರೀಫ್, ಮುತ್ತಲಿಬ್ ಉಸ್ತಾದ್, ನೆಲ್ಯಹುದಿಕೇರಿ ಹನೀಫ್ ಫೈಝಿ, ಸಹಾಯ ಟ್ರಸ್ಟ್ ಪ್ರಮುಖರಾದ ಎ.ಕೆ ಅಬ್ದುಲ್ಲಾ, ಇಕ್ಬಾಲ್ ಉಸ್ತಾದ್, ಮಣಿ ಮೊಹಮ್ಮದ್, ಕೆ.ಎಂ ಬಶೀರ್, ಎ.ಕೆ ಹಕೀಂ ಸೇರಿದಂತೆ ಇನ್ನಿತರರು ಹಾಜರಿದ್ದರು.