ಗೋಣಿಕೊಪ್ಪ ವರದಿ, ಸೆ. 28 ; ಕೊಡಗು ಹಿಂದೂ ಮಲೆಯಾಳಿ ಸಮಾಜದ ಉದ್ಘಾಟನಾ ಕಾರ್ಯಕ್ರಮ ತಾ. 29 ರಂದು (ಇಂದು) ಗೋಣಿಕೊಪ್ಪ ಪರಿಮಳ ಮಂಗಳ ವಿಹಾರದಲ್ಲಿ ನಡೆಯಲಿದೆ.

ಸಾಂಸ್ಕøತಿಕ ಕಾರ್ಯಕ್ರಮ, ಸಮಾಜದ ಉದ್ಘಾಟನೆ, ಸಮಾಜದ ಕ್ರೀಡಾ ಸಾಧಕರಿಗೆ ಸನ್ಮಾನ, ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಅರಮೇರಿ ಕಳಂಚೇರಿ ಮಠದ ಸ್ವಾಮೀಜಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮಡಿಕೇರಿ ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿ, ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ನಿವೃತ್ತ ಮುಖ್ಯ ಶಿಕ್ಷಕಿ ಎಂ.ಕೆ. ಶ್ಯಾಮಲಾ ಪಾಲ್ಗೊಳ್ಳಲಿದ್ದಾರೆ.

ಕೊಡಗು ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ಪಿ.ಎಸ್. ಶರತ್‍ಕಾಂತ್, ಗೌ. ಅಧ್ಯಕ್ಷ ಭಾಸ್ಕರನ್, ಸಲಹೆಗಾರ ಸಂಜೀವ್, ಪ್ರ. ಕಾರ್ಯದರ್ಶಿ ವಿ.ವಿ. ಅರುಣ್ ಕುಮಾರ್, ಎಸ್‍ಎನ್‍ಡಿಪಿ ಗೋಣಿಕೊಪ್ಪ ಶಾಖೆ ಅಧ್ಯಕ್ಷ ಕೆ. ಜೆ. ಜಯೇಂದ್ರ, ಕೆ.ಎನ್.ಎಸ್.ಎಸ್. ಗೋಣಿಕೊಪ್ಪ ಶಾಖೆ ಅಧ್ಯಕ್ಷ ಪಿ.ಇ. ಪವಿತ್ರನ್, ಗೋಣಿಕೊಪ್ಪ ವಿಶ್ವಕರ್ಮ ಸಮಾಜ ಅಧ್ಯಕ್ಷ ಕೆ.ಎ. ವಿನೋದ್, ಮಲೆಯಾಳಿ ಸಮಾಜ ಪಾಲಿಬೆಟ್ಟ ಘಟಕ ಅಧ್ಯಕ್ಷ ವಿ.ಬಿ. ರಿನೀಶ್, ಶ್ರೀಮಂಗಲ ಘಟಕ ಅಧ್ಯಕ್ಷ ಎಂ.ಎಸ್. ಮುರುಳಿ ಮೋಹನ್ ಪಾಲ್ಗೊಳ್ಳಲಿದ್ದಾರೆ ಎಂದರು ಸಮಾಜದ ಪ್ರಧಾನ ಕಾರ್ಯದರ್ಶಿ ವಿ. ವಿ. ಅರುಣ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.