ನಾಪೆÇೀಕ್ಲು, ಸೆ. 28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಡಿಕೇರಿ ಹಾಗೂ ವೀರಾಜಪೇಟೆ ಬಿ.ಸಿ. ಟ್ರಸ್ಟ್ ವತಿಯಿಂದ ಬಾಳುಗೋಡುವಿನಲ್ಲಿ ಕೃಷಿಕ ಸದಸ್ಯರಿಗೆ ನರ್ಸರಿ ಕೃಷಿ ತರಬೇತಿ ಕಾರ್ಯಕ್ರಮ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ಸದಾಶಿವಗೌಡ ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲ ಉದ್ಘಾಟಿಸಿದರು.

ಈ ಸಂದರ್ಭ ಡಾ. ಪ್ರಭಾಕರ್, ಕೃಷಿ ಅಧಿಕಾರಿ ಚೇತನ್ ಕೆ, ಮೇಲ್ವಿಚಾರಕಿ ರತ್ನಾ ಮೈಪಾಲ, ಸೇವಾಪ್ರತಿನಿಧಿ ಪುಷ್ಪ, ಒಕ್ಕೂಟದ ಅಧ್ಯಕ್ಷ ಗಣೇಶ್, ಪಂಚಾಯಿತಿ ಸದಸ್ಯರಾದ ಶ್ರೀಜಾ, ಪುಷ್ಪವಲ್ಲಿ ಉಪಸ್ಥಿತರಿದ್ದರು.