ಚೆಟ್ಟಳ್ಳಿ, ಸೆ. 28: ವಿನಾಯಕ ಮನೋರಂಜನಾ ಸಂಘ ಚೆಟ್ಟಳ್ಳಿಯ ಕೈಲ್ ಮುಹೂರ್ತ ಸಂತೋಷಕೂಟ ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ನಡೆಯಿತು. ಸಂಘದ ಹಿರಿಯ ಸದಸ್ಯರಾದ ಬಲ್ಲಾರಂಡ ಬಿ. ಕಾರ್ಯಪ್ಪ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪುರುಷರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವದು, ಬಾರದ ಕಲ್ಲು ಎಸೆತ, ಬಿಂದಿ ಅಂಟಿಸುವದು, ಮಹಿಳೆಯರಿಗೆ ಬೆಲೂನಿಗೆ ಗುಂಡು ಹೊಡೆಯುವದು, ಹೌಸಿ-ಹೌಸಿ, ಚೆಂಡು ಎಸೆತ ಹಾಗೂ ಒಳಾಂಗಣ ಕ್ರೀಡೆ ಏರ್ಪಡಿಸಲಾಗಿತ್ತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ದಂಬೆಕೋಡಿ ಹರೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಹಲವಾರು ಕಾರ್ಯಕ್ರಮವನ್ನು ಆಯೋಜಿಸಿತ್ತಾ ಬರುತ್ತಿದ್ದು, ಕಳೆದ ವರ್ಷ ಕೊಡಗಿನಲ್ಲಾದ ಅತಿವಷ್ಠಿಯ ಹಿನ್ನೆಲೆ ಸಂಘದಿಂದ ನಡೆಯಬೇಕಾಗಿದ್ದ ಕಾರ್ಯಕ್ರವನ್ನು ಮೊಟಕುಗೊಳಿಸಿ ಆ ಹಣದಿಂದ ಆಸ್ತಿಪಾಸ್ತಿ ನಷ್ಟಪಟ್ಟ ಜನರಿಗೆ ಸೋಲಾರ್ ದೀಪವನ್ನು ನೀಡಲಾಗಿದೆ ಎಂದರು.
ಸಂಘದ ಸದಸ್ಯ ಮುಳ್ಳಂಡ ಕರಣ್ ಕಾವೇರಪ್ಪ ಅವರಿಗೆ ಗೌರವ ಡಾಕ್ಟರೇಟ್ ಸಿಕ್ಕಿರುವದಕ್ಕೆ ಸಂಘದ ವತಿಯಿಂದ ಹಿರಿಯ ಸದಸ್ಯರಾದ ನಿವೃತ್ತ ಏರ್ಫೋರ್ಸ್ ಅಧಿಕಾರಿ ಪುತ್ತರಿರ ಗಣೇಶ್ ಭೀಮಯ್ಯ ಸನ್ಮಾನಿಸಿದರು. ಕಾರ್ಯದರ್ಶಿ ಸನ್ಮಾನಿತರ ಪರಿಚಯಿಸಿದರು. ಉನ್ನತ ಅಂಕಗಳನ್ನು ಪಡೆದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಪುರಸ್ಕಾರ ನೀಡಲಾಯಿತು. ಕ್ರೀಡೆಯಲ್ಲಿ ವಿಜೇತರಾದವರಿಗೆಲ್ಲ ನಗದು ಬಹುಮಾನ ನೀಡಲಾಯಿತು. ಸಂಘದ ಜಂಟಿ ಕಾರ್ಯದರ್ಶಿ ಚೋಳಪಂಡ ವಿಜಯ ವಂದಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಮುಳ್ಳಂಡÀ ಪುಶ್ಯ ರಂಜನ್, ಖಜಾಂಚಿಗಳಾದ ಕೊಂಗೇಟಿರ ಲೋಕೇಶ್ ಅಚ್ಚಪ್ಪ, ಪರ್ಲಕೋಟಿ ತಿರುಪತಿ, ನಿರ್ದೇಶಕರಾದ ಮುಳ್ಳಂಡ ರತ್ತು ಚಂಗಪ್ಪ, ಪೇರಿಯನ ಘನಶ್ಯಾಂ, ಬಲ್ಲಾರಂಡ ಸಿ. ನಾಣಯ್ಯ ಹಾಜರಿದ್ದರು.