ಮಡಿಕೇರಿ, ಸೆ. 28: ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್‍ನ ವರ್ತಕರು ಸೇರಿ ಎನ್.ಟಿ.ಸಿ. ವ್ಯವಸ್ಥಾಪಕ ಹಕೀಂ ಅವರಿಗೆ ಬೈಕನ್ನು ಉಡುಗೊರೆಯಾಗಿ ನೀಡಿದರು.
ನೆರೆ ಪ್ರವಾಹದಿಂದ ಎನ್.ಟಿ.ಸಿ.ಯ 40ಕ್ಕೂ ಹೆಚ್ಚು ಮಳಿಗೆಗಳು ನೀರಿನಿಂದ ಮುಳುಗಡೆಯಾಗಿದ್ದ ವೇಳೆ ಎನ್.ಟಿ.ಸಿ. ವ್ಯವಸ್ಥಾಪಕ ಹಕೀಂ ಸಂತ್ರಸ್ತರೊಡನೆ ರಾತ್ರಿ-ಹಗಲೆನ್ನೆದೆ ಕಾರ್ಯನಿರ್ವಹಿಸಿರುವದರ ಜೊತೆಗೆ ಸಂತ್ರಸ್ತ ವರ್ತಕರ ಅಗತ್ಯ ದಾಖಲಾತಿಗಳನ್ನು ಒದಗಿಸಿ ನೆರೆಪರಿಹಾರ ಲಭಿಸಲು ಶ್ರಮಪಟ್ಟ ಕಾರಣಕ್ಕಾಗಿ ವರ್ತಕರು ಸೇರಿ ಬುಲೆಟ್ ಬೈಕನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದು ಎನ್.ಟಿ.ಸಿ. ಮಾಲೀಕ ಅಬ್ದುಲ್ ಸಲಾಂ ರಾವತರ್ ತಿಳಿಸಿದರು.
ಈ ಸಂದರ್ಭ ಎನ್.ಟಿ.ಸಿ. ಕಚೇರಿ ಮುಖ್ಯಸ್ಥ ರಮೇಶ್, ವರ್ತಕರಾದ ಮುರಳಿ ಅಂಚೆಮನೆ, ಮೈಸಿ, ಲೋಕೇಶ್, ಬಷೀರ್ ಹಾಗೂ ಮತ್ತಿತರರು ಇದ್ದರು.