ಮಡಿಕೇರಿ, ಸೆ. 28: ವೀರಾಜಪೇಟೆಯ ಅನುರಾಧ್ ಸಂಸ್ಥೆಯಿಂದ ತಾ. 30 ರಂದು ಮಡಿಕೇರಿ ಬಳಿಯಲ್ಲಿ ಭೂಕುಸಿತಕ್ಕೊಳಗಾದ ಇಳಿಜಾರು ಪ್ರದೇಶಗಳ ಸ್ಥಿರೀಕರಣ ವಿಧಾನಗಳ ಬಗ್ಗೆ ತರಬೇತಿ ಮತ್ತು ಪ್ರಾತಕ್ಷಿಕೆ ಹಮ್ಮಿಕೊಳ್ಳಲಾಗಿದೆ.
ಜಮ್ಮುಕಾಶ್ಮೀರದ ಐ.ಐ.ಟಿ.ಯ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಪ್ರೊಫೆಸರ್ ಚಂದನ್ ಘೋಷ್ ತರಬೇತುದಾರಾಗಿರುವ ಕಾರ್ಯಕ್ರಮವನ್ನು ತಾ.30 ರಂದು ಬೆಳಗ್ಗೆ 10.30 ಗಂಟೆಗೆ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಉದ್ಘಾಟಿಸಲಿದ್ದಾರೆ. ನಂತರ, ಮಂಗಳೂರು ರಸ್ತೆಯ ಇಳಿಜಾರನ್ನು ಲಾವಂಚ ಹುಲ್ಲಿನ ಸಸಿಗಳು ಹಾಗೂ ಇತರ ವಿಧಾನಗಳಿಂದ ಸ್ಥಿರೀಕರಣ ಮಾಡಲಾಗುತ್ತದೆ ಎಂದು ಅನುರಾಧ್ ಸಂಸ್ಥೆಯ ಸಂಚಾಲಕಿ ಸಲೀಲ ಪಾಟ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.