ಮಡಿಕೇರಿ, ಸೆ. 28 : ತಾ. 29ರಂದು (ಇಂದು) ಆರಂಭಗೊಳ್ಳಲಿರುವ ಕರಗ ಉತ್ಸವದ ಸ್ಥಳ ಪಂಪಿನ ಕೆರೆಗೆ ಹೊಸ ಕಾಯಕಲ್ಪ ನೀಡಲಾಗಿದೆ.

ನಾಲ್ಕು ಶಕ್ತಿ ದೇವತೆಗಳ ಪೂಜಾ ಸ್ಥಳದಲ್ಲಿ ಕರಗ ದಿನದಂದು ಭಕ್ತಾದಿಗಳ ನೂಕುನುಗ್ಗಲು ಉಂಟಾಗುತ್ತಿತ್ತು. ಹಾಗಾಗಿ ಈ ಬಾರಿ ಆ ಸ್ಥಳಕ್ಕೆ ನಾಲ್ಕು ದೇವಾಲಯಗಳ ಪ್ರತಿನಿಧಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.

ಉಳಿದಂತೆ ಪಕ್ಕದ ಖಾಲಿ ಜಾಗವನ್ನು ಜೆ.ಸಿ.ಬಿ. ಬಳಸಿ ಸಮತಟ್ಟು ಮಾಡಲಾಗಿದ್ದು, ಅಲ್ಲಿ ಶಾಮಿಯಾನ ಅಳವಡಿಸಿ ಇತರರಿಗೆ ಸ್ಥಳಾವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ ತಿಳಿಸಿದ್ದಾರೆ.