ಸೋಮವಾರಪೇಟೆ, ಸೆ. 27: ಭಾರತೀಯ ಜೀವ ವಿಮಾ ನಿಗಮದಲ್ಲಿ ಅಸಿಸ್ಟೆಂಟ್ ಹುದ್ದೆ ನೇಮಕಾತಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೈಸೂರು ವಿಭಾಗದ ವಿಮಾ ನಿಗಮ ನೌಕರರ ಸಂಘದ ವತಿಯಿಂದ ಉಚಿತ ತರಬೇತಿ ನೀಡಲಾಗುವದು ಎಂದು ಸಂಘದ ಕಾರ್ಯದರ್ಶಿ ಎಸ್.ಎಸ್. ನಾಗೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಅಕ್ಟೋಬರ್ 1 ಕೊನೆ ದಿನಾಂಕವಾಗಿದ್ದು, ಅ. 21 ಮತ್ತು 22 ರಂದು ಅನ್ಲೈನ್ ಪರೀಕ್ಷೆ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಸಂಘದ ಸೋಮವಾರಪೇಟೆ ಘಟಕದ ಪದಾಧಿಕಾರಿಗಳಾದ ಎಸ್.ಎಂ. ಪಾರ್ವತಿ (9886633805), ಕೆ.ಕೆ. ಪ್ರೇಮ (9742559757) ಅವರುಗಳನ್ನು ಸಂಪರ್ಕಿಸಬಹುದು.