ಕೂಡಿಗೆ, ಸೆ. 26: ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸಭೆಗಳಲ್ಲಿ ತೀರ್ಮಾನಿಸಿ ದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡು ರೂ. 41 ಲಕ್ಷ ಲಾಭಗಳಿಸಿದೆ ಎಂದು ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ ಹೇಳಿದರು.

ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಕಳೆದ ವಾರ್ಷಿಕ ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ಅನುಷ್ಠಾನಗೊಳಿಸುವದರ ಮೂಲಕ ರೈತರ ಪ್ರಗತಿಗೆ ಸಹಕಾರಿಯಾಗಿರುತ್ತೇವೆ.

ಸಂಘವು 6992 ಸದಸ್ಯರನ್ನು ಹೊಂದಿದ್ದು, ಸದಸ್ಯರು, ಸದಸ್ಯೇತರರು ಹಾಗೂ ಸಿಬ್ಬಂದಿ ವರ್ಗದವರಿಂದ ರೂ. 4,20,916 ಠೇವಣಿ ಇರುತ್ತದೆ. ಸದಸ್ಯರಿಗೆ ವಿವಿಧ ರೀತಿಯ ಸಾಲ ಗಳನ್ನು ವಿತರಿಸಲಾಗಿದೆ ಎಂದರು. ರೈತರಿಗೆ ಕೆಸಿಸಿ ಸಾಲ ರೂ. 11,70,95,882, ಜಾಮೀನು ಸಾಲ ರೂ. 2,09,20,957, ಸ್ವಸಹಾಯ ಗುಂಪು ರೂ. 1,37,97,801, ಆಭರಣ ಸಾಲ ರೂ. 1,02,76,643 ನೀಡಿದ್ದು, ಒಟ್ಟು ರೂ. 41 ಲಕ್ಷ ಲಾಭವನ್ನು ಸಂಘವು ಗಳಿಸಿದೆ ಎಂದರು.

ಸಭೆಯಲ್ಲಿ ಮುಖ್ಯ ಅತಿಥಿ ಕುಶಾಲನಗರ ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ತುಂಗರಾಜ್ ಮಾತನಾಡಿ, ರೈತರಿಗೆ ವಾಹನ ಸಾಲ ಮತ್ತು ಇನ್ನಿತರ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷ ಡಿ.ಆರ್. ಪ್ರೇಮ್‍ಕುಮಾರ್, ನಿರ್ದೇಶಕರಾದ ಟಿ.ಕೆ. ಕುಮಾರ್, ಹೆಚ್.ಟಿ. ಕುಶಾಲಪ್ಪ, ಹೆಚ್.ಬಿ. ಚಂದ್ರಪ್ಪ, ಟಿ.ಕೆ. ಪಾಂಡುರಂಗ, ಟಿ.ಪಿ. ಪ್ರಸನ್ನ, ಹೆಚ್.ಆರ್. ಭಾಗ್ಯ, ಟಿ.ಎಂ. ಲಲಿತ , ಟಿ.ಜಿ. ಲೋಕೇಶ್, ಟಿ.ಸಿ. ಶಿವಕುಮಾರ್, ಟಿ.ಜಿ. ಶ್ರೀನಿವಾಸ್, ಸಂಘದ ಮೇಲ್ವೀಚಾರಕ ಎಸ್.ಡಿ. ಶಶಿಕುಮಾರ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೀವನ್ ಇದ್ದರು.