ಸಂಪಾಜೆ, ಸೆ. 25: ಸಂಪಾಜೆ ಗ್ರಾಮ ಪಂಚಾಯತ್‍ನಲ್ಲಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಧಾರ್ ಸಂಬಂಧಿತ ಸಮಸ್ಯೆಗಳಿಗೆ ಆಧಾರ್ ಕೇಂದ್ರವನ್ನು 1 ವಾರದ ಮಟ್ಟಿಗೆ ತೆರೆಯಲಾಯಿತು. ಇದೆ ವೇಳೆ ಸಂಪಾಜೆ ಪಂಚಾಯತ್ ಅಧ್ಯಕ್ಷ ಕುಮಾರ್ ಚೆದ್ಕಾರ್, ಸದಸ್ಯರಾದ ರಾಜೇಶ್ವರಿ, ಕೃಷ್ಣ ಬೆಳ್ಚಪಾಡ ಮತ್ತು ಆಧಾರ್ ನೋಂದಣಿ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಸಂಪಾಜೆ ಹೋಬಳಿ ಸಾರ್ವಜನಿ ಕರಿಗೆ ಆಧಾರ್ ಸಂಬಂಧಿತ ತಿದ್ದುಪಡಿ, ಹೊಸತಾಗಿ ನೋಂದಾಯಿಸುವ, ಹಾಗೂ ಆಧಾರ್ ಸಂಬಂಧಿತ ಯಾವದೇ ಸಮಸ್ಯೆ ಇದ್ದರೆ ಮೂಲ ದಾಖಲೆಯೊಂದಿಗೆ ಹಾಜರಾಗಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ಅಧ್ಯಕ್ಷರು ಕೋರಿದ್ದಾರೆ. -ಶಭರೀಶ್ ಕುದ್ಕುಳಿ