ಮಡಿಕೇರಿ, ಸೆ. 25: ರಾಮಕೃಷಾಶ್ರಮದ ಉಪಾಧ್ಯಕ್ಷ ಸ್ವಾಮಿ ಗೌತಮಾನಂದ ಜೀ ಮಹಾರಾಜರವರು ತಾ. 26ರಂದು (ಇಂದು) ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಭಕ್ತಾದಿಗಳನ್ನು ಭೇಟಿ ಮಾಡಲಿದ್ದು, ತಾ. 27ರ ಸಂಜೆ 4.30 ಗಂಟೆಗೆ ಆಶೀರ್ವಚನ ಹಾಗೂ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ಮತ್ತು ಹೊಲಿಗೆ ಯಂತ್ರಗಳನ್ನು ವಿತರಿಸಲಿದ್ದಾರೆ ಎಂದು ಪೊನ್ನಂಪೇಟೆ ಆಶ್ರಮದ ಸ್ವಾಮಿ ಬೋದಸ್ವರೂಪಾನಂದ ಜೀ ಅವರು ತಿಳಿಸಿದ್ದಾರೆ.