ವೀರಾಜಪೇಟೆ, ಸೆ. 25: ಬೆಂಗಳೂರಿನ ಚಿಗುರು ಕಲ್ಚರಲ್ ಟ್ರಸ್ಟ್‍ನ ವತಿಯಿಂದ ನೀಡಲಾಗುವ ಮಹಿಳಾ ಸಾಧಕಿ ರತ್ನ ಪ್ರಶಸ್ತಿಗೆ ವೀರಾಜಪೇಟೆಯ ನಾಟ್ಯಮಯೂರಿ ನೃತ್ಯ ಶಾಲೆಯ ಸಂಚಾಲಕಿ ವಿದೂಷಿ ಪ್ರೇಮಾಂಜಲಿ ಆಚಾರ್ಯ ಭಾಜನರಾಗಿದ್ದಾರೆ. ನೃತ್ಯ ಕ್ಷೇತ್ರದ ಸಾಧನೆಗೆ ಇವರಿಗೆ ಈ ಪ್ರಶಸ್ತಿ ಲಭಿಸಿದೆ. ಇವರು ವೀರಾಜಪೇಟೆಯ ಚಂದ್ರು ಆಚಾರ್ಯ ಅವರ ಧರ್ಮಪತ್ನಿ ಹಾಗೂ ಬ್ರೈಟ್ ಪಬ್ಲಿಕ್ ಶಾಲೆಯ ಶಿಕ್ಷಕಿಯಾಗಿದ್ದಾರೆ.