ಪಾಲಿಬೆಟ್ಟ, ಸೆ. 25 : ಪಾಲಿಬೆಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯು ತಾ. 23ರಂದು ಸಂಘದ ಸಭಾಂಗಣದಲ್ಲಿ ನಡೆಯಿತು. 2018-19ರಲ್ಲಿ ಸಂಘಕ್ಕೆ ವ್ಯಾಪಾರ ಹಾಗೂ ಬ್ಯಾಂಕಿನ ವಹಿವಾಟಿನಿಂದ ಸುಮಾರು ರೂ. 41,86,392 ಲಕ್ಷ ಲಾಭ ಗಳಿಸಿರುವ ದಾಗಿ ಸಂಘದ ಅಧ್ಯಕ್ಷ ಮೂಕೋಂಡ ವಿಜು ಸುಬ್ರಮಣಿ ತಿಳಿಸಿದರು.
ಸಹಕಾರ ಸಂಘದ ಕಚೇರಿಯಲ್ಲಿ ನಡೆದ ನಿರ್ದೇಶಕರ ಸಭೆಯಲ್ಲಿ ಮಾಹಿತಿ ನೀಡಿದ ಅವರು 1921ರಲ್ಲಿ ಸಂಘ ಸ್ಥಾಪನೆಯಾಗಿದ್ದು, ಇದೀಗ 98ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಮುಂದಿನ 2 ವರ್ಷದಲ್ಲಿ ಶತಮಾನೋತ್ಸವ ನಡೆಸುವ ಸಿದ್ಧತೆಯಲ್ಲಿ ಇದ್ದೇವೆ ಎಂದರು.
ಸಂಘದಲ್ಲಿ ಕ್ಷೇಮನಿಧಿ ರೂ. 2,39,95,555, ಇತರ ನಿಧಿಗಳು ರೂ. 1,38,26,374, ಠೇವಣಿಗಳು ರೂ. 19,45,98,709 ಕೋಟಿ ಇರುವದಾಗಿ ವಿವರಿಸಿದರು. ಸಂಘದ ಸದಸ್ಯರಿಗೆ ಹಾಗೂ ವ್ಯಾಪಾರಸ್ಥರಿಗೆ ಪಿಗ್ಮಿ ಸಾಲ, ರೈತರಿಗೆ ಕೃಷಿ ಸಾಲ, ಕೃಷಿಯೇತರ ಸಾಲ ಇನ್ನಿತರ ಸಾಲಗಳನ್ನು ನೀಡಲಾಗುವದು. ಅಲ್ಲದೆ ಸಂಘದ ಪಾಲಿಬೆಟ್ಟದಲ್ಲಿ ಎರಡು ಮಾರಾಟ ಮಳಿಗೆಯನ್ನು ಹೊಂದಿದ್ದು, ಇದರ ಮುಖಾಂತರ ಗ್ರಾಹಕರಿಗೆ ಪೈಂಟ್, ಹತ್ಯಾರು, ಕ್ರಿಮಿ ನಾಶಕ, ಗೊಬ್ಬರ, ಕ್ಯಾಸ್ಟ್ರೋಲ್, ಹೆಂಚು, ಅಡುಗೆ ಅನಿಲ ಮಾರಾಟ ಮಾಡುತ್ತಿದ್ದು, ಸಂಘದಲ್ಲಿ ಜೆರಾಕ್ಸ್, ಇ-ಸ್ಟಾಂಪಿಂಗ್, ಆಧುನಿಕ ಪೈಂಟ್ ಮಿಕ್ಸಿಂಗ್ ಯಂತ್ರದ ವ್ಯವಸ್ಥೆ ಕೂಡ ಇರುತ್ತದೆ ಎಂದರು.
ಸಂಘದ ಮತ್ತೊಂದು ಶಾಖೆಯು ಚೆನ್ನಯ್ಯನಕೋಟೆಯಲ್ಲಿದ್ದು, ಮಾರಾಟ ಮಳಿಗೆ ಹಾಗೂ ಬ್ಯಾಂಕ್ ವ್ಯವಹಾರ ವನ್ನು ಹೊಂದಿರುತ್ತದೆ. ನಮ್ಮ ಸಂಘ ದಲ್ಲಿ 1123 ಸದಸ್ಯರುಗಳು ಇದ್ದು 2018-19ರಲ್ಲಿ ಒಟ್ಟು ವ್ಯವಹಾರ ರೂ. 1167939879 ಕೋಟಿ ಆಗಿದ್ದು, ಸಂಘದ ಸದಸ್ಯರಿಗೆ ಶೇ.20 ಡಿವಿಡೆಂಟ್ ನೀಡಲಾಗುವದು. ಉತ್ತಮ ವ್ಯವಹಾರ ಮಾಡಿದ ಸದಸ್ಯ ಗ್ರಾಹಕರಿಗೆ ಸ್ವ-ಸಹಾಯ ಸಂಘಕ್ಕೆ ಸಂಘದ ಸದಸ್ಯರ ಮಕ್ಕಳಿಗೆ 10ನೇ ತರಗತಿ, ದ್ವಿತೀಯ ಪಿಯುಸಿ, ಪದವಿ ತರಗತಿ, ರಾಜ್ಯಮಟ್ಟದ ಕ್ರೀಡೆಯಲ್ಲಿ ಸಾಧನೆ ಮಾಡಿರುವವರಿಗೆ ಮತ್ತು ಅತೀ ಹೆಚ್ಚು ಪಿಗ್ಮಿ ಸಂಗ್ರಹಣ ಗಾರರಿಗೂ ಬಹುಮಾನ ಮಹಾಸಭೆಯಲ್ಲಿ ವಿತರಿಸಲಾಗುತ್ತ್ತದೆ.
ಸಂಘದ ಮೇಲ್ವಿಚಾರಕರಾಗಿ ಶಂಕರ್ ಕಾರ್ಯನಿರ್ವಹಿಸುತ್ತಿದ್ದು, ಸಂಘದಲ್ಲಿ ಒಟ್ಟು 10 ಮಂದಿ ನೌಕರರು ಹಾಗೂ 5 ಮಂದಿ ಪಿಗ್ಮಿ ಸಂಗ್ರಹ ಗಾರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೂಕೋಂಡ ವಿಜು ಸುಬ್ರಮಣಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಎಂ.ಎಂ.ಅಪ್ಪಚ್ಚು, ನಿರ್ದೇಶಕರುಗಳಾದ ಕೆ.ಕೆ. ಸುಬ್ರಮಣಿ, ಎಂ.ಎಂ. ಕಾಳಪ್ಪ, ಎ.ಎಸ್. ಶ್ಯಾಂ ಚಂದ್ರ, ವಿ.ವಿ. ಡಾಲು, ಕೆ.ಜಿ. ಧರ್ಮಜ, ಕೆ.ಕೆ. ಸುಭಾಷಿಣಿ, ಕೆ.ಜಿ. ಬೋಜಮ್ಮ, ಹೆಚ್.ಟಿ. ದಿನೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎ. ಶಶಿಕಲ ಉಪಸ್ಥಿತರಿದ್ದರು.