ವೀರಾಜಪೇಟೆ, ಸೆ. 25: 1997ರಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ತಲೆಮರೆಸಿ ಕೊಂಡಿದ್ದ ಕೇರಳ ಮೂಲದ ಆರೋಪಿ ಜಾರ್ಜ್‍ಕುಟ್ಟಿ (54)ಯನ್ನು ಬಂಧಿಸುವಲ್ಲಿ ವೀರಾಜಪೇಟೆ ಪೊಲೀಸ್ ಅಪರಾಧ ಪತ್ತೆದಳದ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಆರೋಪಿಯ ಇರುವಿಕೆಯ ಬಗ್ಗೆ ಕಳೆದ ಒಂದು ತಿಂಗಳಿನಿಂದ ಮಾಹಿತಿ ಕಲೆ ಹಾಕಿದ ಪೊಲೀಸ್ ಮುಖ್ಯ ಪೇದೆಗಳಾದ ಶ್ರೀನಿವಾಸ್, ಎಂ. ಚಂದ್ರಶೇಖರ್ ಜಾರ್ಜ್‍ಕುಟ್ಟಿಯನ್ನು ಕೇರಳ ಗಡಿಭಾಗವಾದ ಪಾಲತುಮ್ ಕಡವ್ ಎಂಬಲ್ಲಿ ಬಂಧಿಸಿದ್ದಾರೆ. ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಮೇರೆಗೆ ಆರೋಪಿಗೆ ನ್ಯಾಯಾಧೀಶರು ಮುಂದಿನ 14 ದಿನಗಳವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಲು ಆದೇಶಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಡಿ. ಸುಮನ್ ಪಣ್ಣೇಕರ್ ಅವರ ನಿರ್ದೇಶನದ ಮೇರೆಗೆ ವೀgಜಪೇಟೆ ಉಪ ಅಧೀಕ್ಷಕ ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆÀಯಲ್ಲಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ವೀಣಾ ನಾಯಕ್, ಸಿಬ್ಬಂದಿಗಳಾದ ಎ.ಎಸ್.ಐ. ಶ್ರೀಧರ್, ರಾಮಪ್ಪ ಬಿ.ಎಂ, ಎಂ.ಆರ್.ರವಿಕುಮಾರ್, ಟಿ.ಎಸ್.ಸತೀಶ್, ಎಂ.ಎಂ.ಕುಶಾಲಪ್ಪ, ಬಿ.ಎಂ.ಉತ್ತಪ್ಪ ಪಾಲ್ಗೊಂಡಿದ್ದರು.