ಮಡಿಕೇರಿ, ಸೆ. 25: ಮೈಸೂರು - ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲಿ ಮಡಿಕೇರಿ ಹಾಗೂ ಸಂಪಾಜೆ ಮಾರ್ಗದ ಹಾದಿಯನ್ನು ವಿಸ್ತರಿಸುವದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಸ್ಪಷ್ಟನೆ ನೀಡಿದೆ.ಈ ರಸ್ತೆ ವಿಸ್ತರಣೆ ಹಾಗೂ ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸುವ ವಿಚಾರಕ್ಕೆ ಸಂಬಂಧಿಸಿದಂತೆ ‘ಶಕ್ತಿ’ ಜಿಲ್ಲೆಯ ಜನಪ್ರತಿನಿಧಿಗಳ ಅಭಿಪ್ರಾಯ ಬಯಸಿದ ಸಂದರ್ಭ ಅವರುಗಳು ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಈ ಬಗ್ಗೆ ಸಂಸದರು ಪ್ರತಿಕ್ರಿಯೆ ನೀಡ ಬೇಕಾಗಿದೆ ಎಂಬದೂ ಜಿಲ್ಲೆಯ ಶಾಸಕರುಗಳ ಅನಿಸಿಕೆ ಯಾಗಿದೆ. ಈ ಬಗ್ಗೆ ‘ಶಕ್ತಿ’ ಸಂಸದ ಪ್ರತಾಪ್ಸಿಂಹ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಲಭ್ಯರಾಗಲಿಲ್ಲ.ಯಾವದೇ ಆದೇಶ ಇಲ್ಲ : ಕೆಜಿಬಿ ರಾಷ್ಟ್ರೀಯ ಹೆದ್ದಾರಿ ಪ್ರಸ್ತಾವನೆ ವಿಚಾರ ಹಿಂದಿನಂತೆಯೇ ಇದೆ. ಇದನ್ನು ಕೈಬಿಡಲಾಗಿರುವ ಯಾವದೇ ಅಧಿಕೃತ ಆದೇಶ ಇಲ್ಲ ಎಂದಿರುವ ಶಾಸಕ ಕೆ.ಜಿ.ಬೋಪಯ್ಯ ಅವರು ಹೆದ್ದಾರಿ ಉದ್ದೇಶಿತ ಯೋಜನೆಯಂತೆಯೇ ಆಗಲಿದೆ ಎಂದಿದ್ದಾರೆ. ಕೈಬಿಡಲಾಗಿದೆ ಎಂಬದು ನಿಜವಲ್ಲ, ಹೇಗೆ ವೈಜ್ಞಾನಿಕವಾಗಿ ರಸ್ತೆ ವಿಸ್ತರಣೆ ಮಾಡಬಹುದು ಎಂಬ ವಿಚಾರವಷ್ಟೆ ಇದೆ ಎಂದು ಅವರು ಹೇಳಿದ್ದಾರೆ.
ಆಗಲೇಬೇಕಾಗಿದೆ : ರಂಜನ್ ರಸ್ತೆ ವಿಸ್ತರಣೆ ಆಗಲೇ ಬೇಕಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ಶಾಸಕ ಅಪ್ಪಚ್ಚುರಂಜನ್ ಅವರು ಸದ್ಯಕ್ಕೆ ತಮಗಿರುವ ಮಾಹಿತಿ ಪ್ರಕಾರ ಚತುಷ್ಟಥ ರಸ್ತೆ ಯೋಜನೆ ಹಾಗೆಯೇ ಇದೆ; ಪ್ರಸ್ತುತ ವಾಹನದಟ್ಟಣೆ ಅಧಿಕವಾಗುತ್ತಿರುವದರಿಂದ ಇದು ಅನಿವಾರ್ಯವೂ ಆಗಿದೆ ಎಂದಿದ್ದಾರೆ.
ಅಧಿಕೃತ ಮಾಹಿತಿ ಇಲ್ಲ : ಸುನಿಲ್
ಈ ವಿಚಾರದ ಬಗ್ಗೆ ಸದ್ಯದಮಟ್ಟಿಗೆ ತಮಗೆ ಯಾವದೇ ಅಧಿಕೃತ ಮಾಹಿತಿ ಲಭಿಸಿಲ್ಲ. ಅಧಿಕೃv Àವಾದ ವಿವರ ಪಡೆಯಲು ಪ್ರಯತ್ನಿಸ ಲಾಗುವದು
(ಮೊದಲ ಪುಟದಿಂದ) ಎಂದು ಎಂಎಲ್ಸಿ ಸುನಿಲ್ ಸುಬ್ರಮಣಿ ಪ್ರತಿಕ್ರಿಯಿಸಿದರು.
ಸಂಸದರಿಗೆ ಜವಾಬ್ದಾರಿ : ವೀಣಾ
ರಾಷ್ಟ್ರೀಯ ಹೆದ್ದಾರಿ ವಿಚಾರ ಕೇಂದ್ರದ ಯೋಜನೆಯಾಗಿದ್ದು, ಈ ವಿಚಾರದಲ್ಲಿ ಸಂಸದರಿಗೆ ಹೆಚ್ಚು ಜವಾಬ್ದಾರಿ ಇದ್ದು ಅವರು ಈ ಬಗ್ಗೆ ಸೂಕ್ತ ವಿವರ ತಿಳಿಸಬೇಕು, ರಸ್ತೆ ವಿಸ್ತರಣೆ ಕುರಿತಾಗಿ ಜಿಲ್ಲೆಯ ಜನರ ಅಭಿಪ್ರಾಯವೂ ಇಲ್ಲಿ ಮುಖ್ಯ ಎಂದು ಮತ್ತೋರ್ವ ಶಾಸಕಿ ವೀಣಾ ಅಚ್ಚಯ್ಯ ಅಭಿಪ್ರಾಯಪಟ್ಟರು.