ಸುಂಟಿಕೊಪ್ಪ ಮಧುರಮ್ಮ ಕುಟುಂಬದ ಶಿವಣ್ಣ (67) ಅವರು ತಾ. 25 ರಂದು ನಿಧನರಾದರು ಮೃತರ ಅಂತ್ಯಕ್ರಿಯೆ ತಾ. 26 ರಂದು (ಇಂದು) ಮಧ್ಯಾಹ್ನ ಮಧುರಮ್ಮ ಕುಟುಂಬದ ರುದ್ರಭೂಮಿಯಲ್ಲಿ ನೇರವೇರಲಿದೆ.

ಟಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು (ಚಿಮ್ಮಿಚ್ಚಿಕುಂಡ್) ನಿವಾಸಿ, ದಿ. ಸಿ.ಪಿ. ಆಲಿ ಅವರ ಪುತ್ರ ಇಸ್ಮಾಯಿಲ್ ಮುಸ್ಲಿಯಾರ್ (59) ಅವರು ತಾ. 25 ರಂದು ಸಂಜೆ ನಿಧನರಾದರು. ಮೃತರು ಪತ್ನಿ, ನಾಲ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ತಾ. 26 ರಂದು (ಇಂದು) ಬೆಳಿಗ್ಗೆ ಹಳ್ಳಿಗಟ್ಟು ಬದರ್ ಜುಮಾ ಮಸೀದಿಯ ಆವರಣದ ಖಬರ್ ಸ್ಥಾನದಲ್ಲಿ ಜರುಗಲಿದೆ.