ಗೋಣಿಕೊಪ್ಪ ಸೆ. 25: ನೊಕ್ಯ ಗ್ರಾಮದಲ್ಲಿ ಹುಲಿ ದಾಳಿಗೆ 2 ವರ್ಷ ಪ್ರಾಯದ ಕರು ಬಲಿಯಾಗಿದೆ.

ಅಲ್ಲಿನ ಚೆಪ್ಪುಡೀರ ರಾಜಾ ಎಂಬವದರಿಗೆ ಸೇರಿದ ಕರು ಮಧ್ಯಾಹ್ನ ಗದ್ದೆಯಲ್ಲಿ ಮೇಯುತ್ತಿದ್ದಾಗ ದಾಳಿ ನಡೆಸಿರುವ ಹುಲಿ ಕೊಂದು ಹಾಕಿ ಕಾಫಿ ತೋಟ ಸೇರಿಕೊಂಡಿದೆ. ಇದನ್ನು ಕಂಡ ಜನರು ಕೂಗಿಕೊಂಡಿದ್ದು, ಕರುವಿನ ದೇಹ ಬಿಟ್ಟು ತೆರಳಿದೆ. ಅಲ್ಲಿನ ಚೆಪ್ಪುಡೀರ ಕುಟುಂಬಸ್ಥರಿಗೆ ಸೇರಿದ ಜಾಗದಲ್ಲಿ ಸೇರಿಕೊಂಡಿದ್ದು, ಗ್ರಾಮದಲ್ಲಿ ಆತಂಕ ಮೂಡಿಸಿದೆ. ಸ್ಥಳಕ್ಕೆ ತಿತಿಮತಿ ಅರಣ್ಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು.