ಮಡಿಕೇರಿ ಸೆ. 25: ಮಡಿಕೇರಿ ಐತಿಹಾಸಿಕ ದಸರಾ ಉತ್ಸವದಲ್ಲಿ ಮಹತ್ವ ಪಡೆದುಕೊಂಡಿರುವ ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವ ತಾ. 29 ರಿಂದ ಆರಂಭಗೊಳ್ಳಲಿದೆ ಎಂದು ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯ ಸಮಿತಿ ಅಧ್ಯಕ್ಷ ಜಿ.ವಿ. ರವಿ ಕುಮಾರ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 29 ರಂದು ಅಪರಾಹ್ನ 2 ಗಂಟೆಗೆ ನಾಲ್ಕು ದೇವಾಲಯ ಗಳಿಂದ ಕರಗಗಳನ್ನು ಶೃಂಗರಿಸಲು ಪಂಪಿನ ಕೆರೆಗೆ ಒಟ್ಟಾಗಿ ತೆರಳಲಿದ್ದು, ಅಲ್ಲಿ ಕರಗ ಶೃಂಗಾರದ ನಂತರ ಸಾಂಪ್ರದಾಯದಂತೆ ಪೂಜೆ ಸಲ್ಲಿಸಿ 6 ಗಂಟೆಯ ನಂತರ ಪಂಪಿನ ಕೆರೆಯಿಂದ ಮೆರವಣಿಗೆ ಆರಂಭ ವಾಗಲಿದೆ. ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯದ ಮಹಿಳಾ ಸದಸ್ಯರು ಈ ಬಾರಿ ಕಳಶÀ ಗಳೊಂದಿಗೆ ನಾಲ್ಕು ಶಕ್ತಿ ದೇವತೆಗಳ ಕರಗಗಳನ್ನು ಬರಮಾಡಿಕೊಳ್ಳಲಿದ್ದಾರೆ.ಅಂದು ಸಂಜೆ ಪಂಪಿನ ಕೆರೆಯಿಂದ ಹೊರಡುವ ಕರಗಗಳು ಭಕ್ತರಿಂದ ಪೂಜೆ ಸ್ವೀಕರಿಸಿಕೊಂಡು ಶ್ರೀ ಬಸವೇಶ್ವರ, ಶ್ರೀ ಚೌಡೇಶ್ವರಿ, ಶ್ರೀ ಕೋದಂಡರಾಮ ಹಾಗೂ ಶ್ರೀ ಕನ್ನಿಕ ಪರಮೇಶ್ವರಿ ದೇವಾಲಯಗಳಿಗೆ ತೆರಳಿ ಪೇಟೆ ಶ್ರೀ ರಾಮ ಮಂದಿರದಲ್ಲಿ ಸೇರಲಿವೆ. ಅಲ್ಲಿಂದ ಕರಗಗಳು ತಮ್ಮ ತಮ್ಮ ದೇವಾಲಯಗಳಿಗೆ ತೆರಳಲಿವೆ ಎಂದರು.

ಕರಗ ಹೊರುವವರು: ಕುಂದುರು ಮೊಟ್ಟೆ ದೇವಾಲಯದ ಕರಗವನ್ನು ಅರ್ಚಕ ಎಮ್. ಹರೀಶ್, ಕೋಟೆ ಮಾರಿಯಮ್ಮ ದೇವಾಲಯದ ಕರಗವನ್ನು ಅರ್ಚಕ ಅನೀಸ್ ಕುಮಾರ್, ಶ್ರೀ ಕಂಚಿ ಕಾಮಾಕ್ಷಿ ದೇವಾಲಯದ ಕರಗವನ್ನು ಅರ್ಚಕ ನವೀನ್ ಕುಮಾರ್ ಹಾಗೂ ದಂಡಿನ ಮಾರಿಯಮ್ಮ ದೇವಾಯಲದ ಕರಗವನ್ನು ಜಿ.ಎಮ್. ಉಮೇಶ್ ಹೊರಲಿದ್ದಾರೆ ಎಂದು ರವಿಕುಮಾರ್ ಮಾಹಿತಿ ನೀಡಿದರು.

(ಮೊದಲ ಪುಟದಿಂದ) ಕೋಟೆ ಮಾರಿಯಮ್ಮ ದೇವಾಲಯ ಪ್ರಧಾನ ಅರ್ಚಕ ಉಮೇಶ್ ಸುಬ್ರಮಣಿ ಮಾತನಾಡಿ, 4 ಕರಗಗಳು ಒಟ್ಟಾಗಿ ನಗರ ಪ್ರದಕ್ಷಿಣೆ ಮಾಡಲು ಈ ಬಾರಿ ದೇವಾಲಯ ಸಮಿತಿ ಹಾಗೂ ಕರಗ ಸಮಿತಿಯವರು ತೀರ್ಮಾನಿಸಿದ್ದಾರೆ. ತಾ. 30 ರಿಂದ ಅ. 3ರ ವರೆಗೆ ಕರಗಗಳು ಸಂಪ್ರದಾಯದಂತೆ ನಗರ ಪ್ರದಕ್ಷಿಣೆ ಮಾಡಲಿದ್ದು ನಾಲ್ಕು ಕರಗಗಳು ವಿಜಯ ದಶಮಿಯಂದು ರಾತ್ರಿ ಮಡಿಕೇರಿ ರಾಜಬೀದಿಯಲ್ಲಿ ನಡೆಯುವ ಶೋಭಯಾತ್ರೆಯಲ್ಲಿ ಪಾಲ್ಗೊಳ್ಳಲಿವೆ. ಬನ್ನಿ ಮಂಟಪ ದವರೆಗೆ ತೆರಳಿ ಅ. 9 ರಂದು ಬೆಳಗ್ಗಿನ ಜಾವ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯಲಾಗುವದು. ಈ ದೈವತಾ ಕಾರ್ಯದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಮನವಿ ಮಾಡಿದರು.

ಕರಗಗಳು ತೆರಳುವ ಮಾರ್ಗ

ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯ ಕರಗ

ತಾ. 30 ರಂದು ಗೌಳಿಬೀದಿ ಮುನೀಶ್ವರ ರಸ್ತೆ, ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ, ಮೈಸೂರು ರಸ್ತೆ, ಮಂಗಳದೇವಿ ನಗರ, ಶಾಂತಿನಿಕೇತನ, ಜಯನಗರ, ಸುದರ್ಶನ ಕೆಳಗಿನ ಬಡಾವಣೆ, ಜಲಾಶಯ ಬಡಾವಣೆ, ಗುಂಡೂ ರಾವ್ ಕಾಂಪೌಂಡ್, ಬ್ರಾಹ್ಮಣರ ಬೀದಿ, ಅಶ್ವತ್ ಕಟ್ಟೆ, ದೇಚೂರು ಹಾಗೂ ಪುಟಾಣಿನಗರಗಳಿಗೆ ತೆರಳಲಿದೆ.

ಅ. 1 ರಂದು ಅಪ್ಪಚ್ಚಕವಿ ರಸ್ತೆ, ಪೆನ್‍ಷನ್ ಲೇನ್ ಪೊಲೀಸ್ ವಸತಿಗೃಹ, ಶ್ರೀ ದಂಡಿನ ಮಾರಿಯಮ್ಮ ದೇವಾಲಯ, ಶ್ರೀ ಓಂಕಾರೇಶ್ವರ ದೇವಾಲಯ ರಸ್ತೆ, ದೇಚೂರು, ದಾಸವಾಳ, ಪೆನ್‍ಷೆನ್ ಲೇನ್, ಶ್ರೀ ಕೋಟೆ ಮಾರಿಯಮ್ಮ ದೇವಾಲಯ, ಕೊಹಿನೂರು ರಸ್ತೆ, ಗೃಹ ನಿರ್ಮಾಣ ಸಂಘದ ರಸ್ತೆ.

ಅ. 2 ರಂದು ರಾಣಿಪೇಟೆ, ವಿನಾಯಕ ರೈಸ್ ಮಿಲ್ ವಠಾರ, ಕಾನ್ವೆಂಟ್ ರಸ್ತೆ, ಪೆರೇಡ್ ಗ್ರೌಂಡ್ ಹಿಂಭಾಗ, ಡೈರಿ ಪಾರ್ಮ್, ಹಳೇ ಪೊಲೀಸ್ ವಸತಿ ಗೃಹ, ರಿಮಾಂಡ್ ಹೋಮ್ ರಸ್ತೆ, ರೇಸ್ ಕೋರ್ಸ್ ರಸ್ತೆ ಹಾಗೂ ಹೊಸ ಬಡಾವಣೆ.

ಅ. 3 ರಂದು ಸ್ಟಿವರ್ಟ್ ಹಿಲ್, ವಿನ್ಸೆಂಟ್ ಕಾಂಪೌಂಡ್, ರೇಸ್ ಕೋರ್ಸ್ ರಸ್ತೆ ಹಾಗೂ ಗೌಳಿ ಬೀದಿ.

ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ಕರಗ

ತಾ. 30 ರಂದು ಮೈಸೂರು ರಸ್ತೆಗಾಗಿ ಶಾಂತಿನಿಕೇತನ ವಠಾರ, ಜಯನಗರ, ಸುದರ್ಶನ ಕೆಳಗಿನ ಬಡಾವಣೆ, ಜಲಾಶಯ ಬಡಾವಣೆ, ಗುಂಡೂರಾವ್ ಕಾಂಪೌಂಡ್, ಬ್ರಾಹ್ಮಣರ ಬೀದಿ, ಅಶ್ವತ್ ಕಟ್ಟೆ, ದೇಚೂರು ಹಾಗೂ ಪುಟಾಣಿನಗರಗಳಿಗೆ ತೆರಳಲಿದೆ.

ಅ. 1 ರಂದು ಶ್ರೀ ಓಂಕಾರೇಶ್ವರ ದೇವಾಲಯ ರಸ್ತೆ, ಜೂನಿಯರ್ ಕಾಲೇಜ್ ರಸ್ತೆ, ರಾಘವೇಂದ್ರ ದೇವಾಲಯ ರಸ್ತೆ, ದಾಸವಾಳ, ರಾಣಿಪೇಟೆ, ಕಾನ್ವೆಂಟ್ ಹಾಗೂ ವಿನಾಯಕ ರೈಸ್ ಮಿಲ್ ವಠಾರ.

ಅ. 2 ರಂದು ಸ್ಟಿವರ್ಟ್ ಹಿಲ್, ರಿಮಾಂಡ್ ಹೋಮ್ ವಠಾರ, ಡಿಎಆರ್ ಪೊಲೀಸ್ ವಸತಿ ಗೃಹ, ಐಟಿಐ ಜಂಕ್ಷನ್ ಹಾಗೂ ಪೆರೇಡ್ ಗ್ರೌಂಡ್ ಹಿಂಭಾಗ.

ಅ. 3 ರಂದು ಎಸ್ಪಿ ಬಂಗಲೆ ರಸ್ತೆ, ಹಳೇ ಇಂಡೇನ್ ಗ್ಯಾಸ್ ವಠಾರ, ಕೊಹಿನೂರು ರಸ್ತೆ, ಪೆನ್‍ಷೆನ್ ಲೇನ್ ರಸ್ತೆ, ಶ್ರೀ ಕೋಟೆ ಮಾರಿಯಮ್ಮ ದೇವಾಲಯ, ಅಪ್ಪಚ್ಚು ಕವಿ ರಸ್ತೆ, ಶ್ರೀ ದಂಡಿನ ಮಾರಿಯಮ್ಮ ದೇವಾಲಯ ಹಾಗೂ ಗೌಳಿ ಬೀದಿ.

ಶ್ರೀ ಕೋಟೆ ಮಾರಿಯಮ್ಮ ದೇವಾಲಯ ಕರಗ

ಸೆ. 30 ರಂದು ಮೈಸೂರು ರಸ್ತೆ, ಶಾಂತಿನಿಕೇತನ, ಜಯನಗರ, ಸುದರ್ಶನ ಬಡಾವಣೆ, ಜಲಾಶಯ ಬಡಾವಣೆ, ಗುಂಡೂರಾವ್ ಕಾಂಪೌಂಡ್, ಬ್ರಾಹ್ಮಣರ ಬೀದಿ, ಅಶ್ವತ್ ಕಟ್ಟೆ, ದೇಚೂರು ಹಾಗೂ ಪುಟಾಣಿ ನಗರಗಳಿಗೆ ತೆರಳಲಿದೆ.

ಅ. 1 ರಂದು ಅಪ್ಪಚ್ಚಕವಿ ರಸ್ತೆ, ಪೆನ್ಸನ್ ಲೇನ್ ಪೊಲೀಸ್ ವಸತಿಗೃಹ, ಶ್ರೀ ದಂಡಿನ ಮಾರಿಯಮ್ಮ ದೇವಾಲಯ, ಶ್ರೀ ಓಂಕಾರೇಶ್ವರ ದೇವಾಲಯ ರಸ್ತೆ, ಜೂನಿಯರ್ ಕಾಲೇಜು ರಸ್ತೆ, ದಾಸವಾಳ, ರಾಣಿಪೇಟೆ, ಕಾನ್ವೆಂಟ್ ರಸ್ತೆ, ಹೊಸಬಡಾವಣೆ ಹಾಗೂ ಗೃಹ ನಿರ್ಮಾಣ ಸಂಘದ ರಸ್ತೆ,

ಅ. 2 ರಂದು ಕರಗ ನಗರ ಪ್ರದಕ್ಷಿಣೆ ಇರುವದಿಲ್ಲ.

ಅ. 3 ರಂದು ಕೆಳಗಿನ ಪೌವರ್ ಹೌಸ್ ರಸ್ತೆ, ಗೌಳಿ ಬೀದಿ ಮುನೀಶ್ವರ ದೇವಾಲಯ, ರಸ್ತೆ, ಶ್ರೀ ಚೌಟಿ ಮಾರಿಯಮ್ಮ ದೇವಾಲಯ, ಸ್ಟಿವರ್ಟ್ ಹಿಲ್, ವಿನ್ಸೆಂಟ್ ಕಾಂಪೌಂಡ್, ಗೌಳಿ ಬೀದಿ, ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯ, ಪೆನ್‍ಷ್ಷನ್ ಲೇನ್ ವಠಾರ.

ಶ್ರೀ ದಂಡಿನ ಮಾರಿಯಮ್ಮ ದೇವಾಲಯ

ಅ. 1 ರಂದು ಗೌಳಿಬೀದಿ ಮುನೀಶ್ವರ ದೇವಾಲಯ, ಮೈಸೂರು ರಸ್ತೆ, ಶಾಂತಿನಿಕೇತನ, ಸುದರ್ಶನ ಕೆಳಗಿನ ಬಡಾವಣೆ, ಗುಂಡೂರಾವ್ ಕಾಂಪೌಂಡ್, ಬ್ರಾಹ್ಮಣರ ಬೀದಿ, ದೇಚೂರು ಮತ್ತು ಪುಟಾಣಿ ನಗರ.

ಅ. 2 ರಂದು ಪೊಲೀಸ್ ವಸತಿ ಗೃಹ, ಶ್ರೀ ಕೋಟೆ ಮಾರಿಯಮ್ಮ ದೇವಾಲಯ, , ಪೆನ್‍ಷನ್ ಲೇನ್, ಕೊಹಿನೂರು ರಸ್ತೆ, ಸ್ಕೂಲ್ ರಸ್ತೆ, ದಾಸವಾಳ ರಸ್ತೆ, ರಾಣಿಪೇಟೆ, ಪೆರೇಡ್ ಗ್ರೌಂಡ್ ಹಿಂಬಾಗ, ಹಳೇ ಡಿಎಆರ್. ವಸತಿ ಗೃಹ, ರಿಮಾಂಡ್ ಹೋಮ್ ವಠಾರ, ಹೊಸ ಬಡಾವಣೆ.

ಅ. 3 ರಂದು ಸ್ಟಿವರ್ಟ್ ಹಿಲ್, ವಿನ್ಸೆಂಟ್ ಕಾಂಪೌಂಡ್, ಹಳೇ ಇಂಡೆನ್ ಗ್ಯಾಸ್ ವಠಾರ, ಗೌಳಿಬೀದಿ, ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯ.

ನಾಲ್ಕು ಕರಗಗಳು ವಿಜಯ ದಶಮಿಯಂದು ರಾತ್ರಿ ಮಡಿಕೇರಿ ರಾಜಬೀದಿಯಲ್ಲಿ ನಡೆಯುವ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ಬನ್ನಿ ಮಂಟಪದ ವರೆಗೆ ತೆರಳಿ ಅ. 9 ರಂದು ಬೆಳಗ್ಗಿನ ಜಾವ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯಲಾಗು ವದೆಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕುಂದುರು ಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಪ್ರಧಾನ ಅರ್ಚಕ ವಿ.ಪಿ.ಚಾಮಿ, ಅರ್ಚಕ ಬಾಲಕೃಷ್ಣ, ದಂಡಿನ ಮಾರಿಯಮ್ಮ ದೇವಾಲಯ ಅರ್ಚಕ ಉಮೇಶ್, ಶ್ರೀ ಕಂಚಿ ಕಾಮಾಕ್ಷಿ ದೇವಾಲಯ ಅರ್ಚಕ ನವೀನ್ ಕುಮಾರ್ ಉಪಸ್ಥಿತರಿದ್ದರು.