ಗುಡ್ಡೆಹೊಸೂರು, ಸೆ. 24: ಸ್ವಚ್ಛ ಭಾರತ್ ಮಿಷನ್ ಅಭಿಯಾನದಡಿ ಟಾಟಾ ಕಾಫಿ ಮತ್ತು ಕೂರ್ಗ್ ಫೌಂಡೇಶ್‍ನ ಅಂಗ ಸಂಸ್ಥೆಯಾದ ಸುಂಟಿಕೊಪ್ಪದ ಸ್ವಸ್ಥ ವಿಶೇಷ ಮಕ್ಕಳ ವಿದ್ಯಾಸಂಸ್ಥೆ ವತಿಯಿಂದ ಗುಡ್ಡೆಹೊಸೂರು ಮತ್ತು ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜ್ಯ ಹೆದ್ದಾರಿಯ ಒಟ್ಟು 9 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆ ಬದಿಯ ಕಸವನ್ನು ತೆಗೆದು ಶುಚಿಗೊಳಿಸಲಾಯಿತು.

ಸುಮಾರು 150 ಮಂದಿ ವಿದ್ಯಾರ್ಥಿಗಳಿರುವ ಸ್ವಸ್ಥ ಶಾಲೆಯ ಒಟ್ಟು 50ಕ್ಕೂ ಹೇÀ್ಚು ವಿದ್ಯಾರ್ಥಿಗಳು, ಮತ್ತು ಸಿಬ್ಬಂದಿ ವರ್ಗ ಹಾಜರಿದ್ದು ಈ ಕಾರ್ಯ ನಡೆಸಿದರು. ಗುಡ್ಡೆಹೊಸೂರಿನಿಂದ ಪ್ರಾರಂಭ ಮಾಡಿ ಏಳನೆ ಹೊಸಕೋಟೆ ವ್ಯಾಪ್ತಿಯವರಗೆ ಸ್ವಚ್ಛ ಮಾಡಿದರು.

ಈ ಸಂದರ್ಭ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ ಹಾಜರಿದ್ದು ಇನ್ನೂ ಮುಂದೆ ಪ್ರತಿ ತಿಂಗಳ ಒಂದು ಶನಿವಾರದಂದು ಈ ರೀತಿಯ ಕಾರ್ಯಕ್ರಮ ನಡೆಸುವದಾಗಿ ತಿಳಿಸಿದರು. ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ ಮತ್ತು ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ಹರಿವು ಮೂಡಿಸುವ ಸಲುವಾಗಿ ಈ ರೀತಿಯ ಕೆಲಸ ಮಾಡುವದರಿಂದ ಮತ್ತು ಪ್ರತಿಯೊಬ್ಬರು ತಮ್ಮ ಸುತ್ತಾ ಮುತ್ತ ಪರಿಸರವನ್ನು ಸ್ವಚ್ಛವಾಗಿಡಲು ಕೈಜೋಡಿಸುವಂತೆ ಕರೆ ನೀಡಿದರು. ಗುಡ್ಡೆಹೊಸೂರಿನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಸಂದÀರ್ಭ ಇಲ್ಲಿನ ಪಂಚಾಯಿತಿ ಅಧ್ಯಕ್ಷೆ ಕೆ.ಎಸ್. ಭಾರತಿ ಮತ್ತು ಪಿ.ಡಿ.ಓ. ಶ್ಯಾಂ ತಮ್ಮಯ್ಯ ಮತ್ತು ಇಲ್ಲಿನ ಆಟೋ ಚಾಲಕರು ಹಾಜರಿದ್ದರು. ಅಲ್ಲದೆ ಗ್ರಾಮ ಪಂಚಾಯಿತಿ ಸಿಬ್ಬಂದಿ ವಿಜಯ್ ಮುಂತಾದವರು ಹಾಜರಿದ್ದರು. ಆನೆಕಾಡು ವ್ಯಾಪ್ತಿಯಲ್ಲಿಯೇ ಒಂದು ಟ್ರ್ಯಾಕ್ಟರ್ ಖಾಲಿ ಬಾಟಲ್ ಮತ್ತು ಇತರ ನಿರುಪಯುಕ್ತ ವಸ್ತುಗಳನ್ನು ಸಂಗ್ರಹಿಸಲಾಯಿತು.