ಮಡಿಕೇರಿ, ಸೆ. 24: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಇವರ ವತಿಯಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಜಿಲ್ಲಾ ಮಟ್ಟದ ದೇಶ ಭಕ್ತಿ ಗೀತಗಾಯನ ಸ್ಪರ್ಧೆಯು ಮಂಗಳವಾರ ನಡೆಯಿತು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಧೀಶರಾದ ನೂರುನ್ನೀಸಾ ಅವರು ಮಾತನಾಡಿ, ಜನಪದ, ದೇಶಭಕ್ತಿ ಗೀತೆ, ಭರತನಾಟ್ಯ ಇಂತಹ ಕಲೆಗಳನ್ನು ಮರೆಯುವಂತಾಗುತ್ತಿದೆ. ಮಕ್ಕಳಲ್ಲಿ ಇದರ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವಂತಾಗಬೇಕು. ಸಂಸ್ಕøತಿ ಉಳಿಸಿ ಬೆಳೆಸಬೇಕೆಂದು ಅವರು ಹೇಳಿದರು. ಜಿಲ್ಲಾ ಪ್ರಧಾನ ಆಯುಕ್ತ ಕಂಬಿರಂಡ ಕಿಟ್ಟು ಕಾಳಪ್ಪ, ರಾಣಿ ಮಾಚಯ್ಯ. ಬೈತಡ್ಕ ಜಾನಕಿ, ಗೌರು ಗಣಪತಿ, ಖಜಾಂಜಿ ಸುನಿಲ್, ಜಿಲ್ಲಾ ಸ್ಕೌಟ್ಸ್ ಪ್ರಧಾನ ಆಯುಕ್ತ ಜಿಮ್ಮಿ ಸ್ವಿಕ್ವೆರ ಮತ್ತಿತರರು ಪಾಲ್ಗೊಂಡಿದ್ದರು. ತಾಲೂಕು ಮಟ್ಟದ ಸ್ಥಳೀಯ ಸಂಸ್ಥೆ ಪ್ರಥಮ ಸ್ಥಾನ ಪಡೆದ ಗೈಡ್ಸ್ ಮತ್ತು ಸ್ಕೌಟ್ಸ್ ತಂಡದ ಕಬ್ ಮತ್ತು ಬುಲ್‍ಬುಲ್‍ಗಳು ಹಾಗೂ ರೋವರ್ ಮತ್ತು ರೇಂಜರ್‍ಗಳು ಭಾಗವಹಿಸಿದ್ದರು. ದಯಮಂತಿ ನಿರೂಪಿಸಿದರು.