ಸುಂಟಿಕೊಪ್ಪ, ಸೆ. 24: ಅಂಗನವಾಡಿ ಕೇಂದ್ರಗಳ ಪೌಷ್ಟಿಕ ಸಪ್ತಾಹ ಕಾರ್ಯಕ್ರಮದಡಿ ಪೋಷಣಾ ಅಭಿಯಾನ ಯೋಜನೆಯನ್ವಯ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಚಾಮುಂಡೇಶ್ವರಿ ದೇವಾಲಯದ ಬಳಿಯ ಅಂಗನವಾಡಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮವನ್ನು ಗ್ರಾ.ಪಂ.ಸದಸ್ಯೆ ಗಂಗಮ್ಮ ಉದ್ಘಾಟಿಸಿದರು.

ಹಿರಿಯ ಆರೋಗ್ಯ ಸಹಾಯಕಿ ಮಾತನಾಡಿ ಗರ್ಭಿಣಿ ಮಹಿಳೆಯರು ಮತ್ತು ತಾಯಂದಿರು ಮೊಳಕೆ ಭರಿಸಿದ ಕಾಳು, ಕಾಯಿ ಪಲ್ಯಗಳು, ವಿವಿಧ ಬಗೆಯ ಕಾಡು ತೋಟಗಳಲ್ಲಿ ಸಿಗುವ ಸೊಪ್ಪುಗಳು ಹಣ್ಣು ಹಂಪಲುಗಳನ್ನು ಸೇವಿಸುವದರಿಂದ ಆಪೌಷ್ಟಿಕತೆಯನ್ನು ತಪ್ಪಿಸಬಹುದು. ಹುಟ್ಟಿದ ಮಕ್ಕಳಿಗೆ ತಾಯಿಯ ಎದೆ ಹಾಲಿನಿಂದ ಮಕ್ಕಳ ಆರೋಗ್ಯ ಹಾಗೂ ಆಪೌಷ್ಟಿಕತೆಯನ್ನು ದೂರ ಮಾಡಲಿದೆ ಎಂದು ಹೇಳಿದರು.À

ಅಂಗನವಾಡಿ ಹಿರಿಯ ಕಾರ್ಯಕರ್ತೆ ಸಾವಿತ್ರಿ ಮಾತನಾಡಿ ಇಂದಿನ ದಿನಗಳಲ್ಲಿ ಗರ್ಭಿಣಿ ಸ್ತ್ರೀಯರು ಮತ್ತು ಮಕ್ಕಳು ಅಪೌಷ್ಟಿಕತೆಯಿಂದ ಸಾವಿನ ಪ್ರಮಾಣವನ್ನು ತಡೆಯುವ ದಿಸೆಯಲ್ಲಿ ಸರಕಾರವು ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರವನ್ನು ನೀಡುತ್ತಿದ್ದು, ಗರ್ಭಿಣಿ ಸ್ತ್ರೀಯರು, ಮಕ್ಕಳ ಸಾವಿನ ಪ್ರಮಾಣವು ಕಡಿತಗೊಂಡಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಸುಮಿತ್ರ ವಹಿಸಿದ್ದರು.

ಟೇಬಲ್ ಮೇಲೆ ಹಲವು ಬಗೆಯ ಹಣ್ಣು ಹಂಪಲು,ಮೊಟ್ಟೆ, ಹಾಲು, ಪೌಷ್ಟಿಕ ಆಹಾರಗಳು, ಕಾಯಿ ಸೊಪ್ಪು ಕಾಳುಗಳ ಮಾಹಿತಿ ನೀಡಿದರು.

ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿಯರು, ಮಕ್ಕಳು ಇದ್ದರು.

ಮೊದಲಿಗೆ ಸೆಲಿನಾ ಜೆಫ್ರಿ ಪ್ರಾರ್ಥಿಸಿ,ಅಂಗನವಾಡಿ ಕಾರ್ಯಕರ್ತೆ ಜೇಸಿ ಡಿಸೋಜ ಸ್ವಾಗತಿಸಿ, ನಿರೂಪಿಸಿದರು.