ಮಡಿಕೇರಿ, ಸೆ. 24: ಮಡಿಕೇರಿ ದಸರಾ ಪ್ರಯುಕ್ತ ಅ. 5ರಂದು ಗಾಂಧಿ ಮೈದಾನದಲ್ಲಿ ನಡೆಯಲಿರುವ ಯುವ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲು ನೃತ್ಯ ತಂಡಗಳ ಆಯ್ಕೆ ಪ್ರಕ್ರಿಯೆ ತಾ. 28ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದೆ. ಒಟ್ಟು 8 ತಂಡಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಹಾಡಿನ ಅವಧಿಯನ್ನು 5.1 ನಿಮಿಷಕ್ಕೆ ಸೀಮಿತಗೊಳಿಸಲಾಗಿದೆ. ವಯಸ್ಸಿನ ಮಿತಿ ಇರುವದಿಲ್ಲ. ಆಯ್ಕೆ ಪ್ರಕ್ರಿಯೆ ನಗರದ ಕಿಂಗ್ಸ್ ಆಫ್ ಕೂರ್ಗ್ ನೃತ್ಯ ಕೇಂದ್ರದಲ್ಲಿ ನಡೆಯಲಿದ್ದು, ನೃತ್ಯ ತಂಡಗಳು ಮುಕ್ತವಾಗಿ ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗೆ 7829131743 ಅಥವಾ 9480003811 ಸಂಪರ್ಕಿಸಬಹುದೆಂದು ಯುವ ದಸರಾ ಸಮಿತಿ ತಿಳಿಸಿದೆ.