ಮಡಿಕೇರಿ, ಸೆ. 24: ಶಾಲೆಗಳಿಗೆ ಅ. 6 ರಿಂದ ಅಕ್ಟೋಬರ್, 20 ರವರೆಗೆ ದಸರಾ ರಜೆ ಘೋಷಣೆಯಾಗಿದ್ದು, ಅ. 3 ಮತ್ತು 4 ರಂದು ನಡೆಯುವ ಅರ್ಧವಾರ್ಷಿಕ ಪರೀಕ್ಷಾ ದಿನಾಂಕವನ್ನು ಜಿಲ್ಲೆಯ ಎಲ್ಲಾ ಶಾಲಾ ಮುಖ್ಯಸ್ಥರು ಬದಲಾವಣೆ ಮಾಡಿಕೊಳ್ಳಬೇಕು ಹಾಗೂ ಅ. 5 ರಂದು ನಡೆಯುವ ಪರೀಕ್ಷಾ ದಿನಾಂಕವನ್ನು ಮಡಿಕೇರಿ ತಾಲೂಕಿನ ಶಾಲಾ ಮುಖ್ಯಸ್ಥರು ಬದಲಾವಣೆ ಮಾಡಿಕೊಳ್ಳಬೇಕು. ಕಾರಣ ಮಕ್ಕಳ ದಸರಾ ಅಂಗವಾಗಿ ಮಕ್ಕಳ ಸಂತೆ, ಅಂಗಡಿ, ಮಂಟಪ, ಛದ್ಮವೇಶ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿರುವದರಿಂದ ಮಕ್ಕಳು ಭಾಗವಹಿಸಲು ಅನುಕೂಲವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ ಸೂಚಿಸಿದ್ದಾರೆ.