ಸಿದ್ದಾಪುರ, ಸೆ. 22: ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಿದ್ದಾಪುರ ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ, ಎಸ್.ಐ.ಓ ಆಫ್ ಇಂಡಿಯಾ, ಕರ್ನಾಟಕ ಜಮಾಅತೆ ಇಸ್ಲಾಮೀ ಹಿಂದ್ ಕೊಡಗು, ಇಕ್ರಾ ಪಬ್ಲಿಕ್ ಸ್ಕೂಲ್, ಪ್ರಬುದ್ಧ ನೌಕರರ ಒಕ್ಕೂಟ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಡಗು ಮತ್ತು ಕಾಸರಗೋಡು ಇವರ ಸಂಯುಕ್ತ ಆಶ್ರಯದಲ್ಲಿ ಕೊಡಗು ನೆರೆ ಸಂತ್ರಸ್ತರಿಗೆ ಹಾಗೂ ಹಾಗೂ ನಾಗರಿಕರಿಗೆ ಏರ್ಪಡಿಸಲಾದ ಉಚಿತ ವೈದ್ಯಕೀಯ ಶಿಬಿರದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ನೂರಾರು ಮಂದಿ ಪಾಲ್ಗೊಂಡಿದ್ದರು.
ಸಿದ್ದಾಪುರದ ಇಕ್ರಾ ಪಬ್ಲಿಕ್ ಶಾಲೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಗಣ್ಯರು ಮನುಷ್ಯನಿಗೆ ಆರೋಗ್ಯವೇ ಮುಖ್ಯವಾಗಿದ್ದು ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಸಲಹೆ ನೀಡಿದರು. ಮಂಗಳೂರು ಹಾಗೂ ಜಿಲ್ಲೆಯ ವೈದ್ಯರುಗಳು ಸೇರಿದಂತೆ 20ಕ್ಕೂ ಅಧಿಕ ವೈದ್ಯರು ಆಗಮಿಸಿ ತಪಾಸಣೆ ನಡೆಸಿದರು.
ಕಾರ್ಯಕ್ರಮದಲ್ಲಿ ಪ್ರಬುದ್ಧ ನೌಕರರ ಒಕ್ಕೂಟದ ಅಧ್ಯಕ್ಷ ಡಾ. ಸತೀಶ್ ಶಿವಮಲ್ಲಯ್ಯ, ಡಾ. ಗೋಪಿನಾಥ, ಡಾ. ಶಾಫಿ, ಪ್ರಮುಖರಾದ ಬಶೀರ್, ಕೆ.ಎನ್. ವಾಸು, ಕೆ.ಯು ಅಬ್ದುಲ್ ಮಜೀದ್, ಜಿಲ್ಲಾ ಪಂಚಾಯತ್ ಸದಸ್ಯೆ ಸುನೀತಾ ಮಂಜುನಾಥ್ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ, ಪಿಡಿಓ ಅನಿಲ್‍ಕುಮಾರ್, ಉಸ್ಮಾನ್ ಹಾಜಿ, ಅಂತೋನಿಜೋಸೆಫ್, ಅಬ್ದುಲ್‍ರೆಹ್ಮಾನ್, ಉಮ್ಮರ್ ಮೌಲವಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಶಾಲಾ ಮುಖ್ಯಸ್ಥರು ಹಾಜರಿದ್ದರು. ಕೆ.ಯು. ಅಬ್ದುಲ್ ರಜಾಕ್ ಸ್ವಾಗತಿಸಿ ವಂದಿಸಿದರು.