ಮಡಿಕೇರಿ, ಸೆ. 23: ಮಡಿಕೇರಿಯಲ್ಲಿ ಅ. 3 ರಂದು ಆಯೋಜಿತ ಜಾನಪದ ಉತ್ಸವದಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ಜಾನಪದ ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ.
ಕೊಡಗು ಜಿಲ್ಲಾ ಜಾನಪದ ಪರಿಷತ್ ಮತ್ತು ಮಡಿಕೇರಿ ನಗರ ದಸರಾ ಸಮಿತಿ ಸಂಯುಕ್ತಾಶ್ರಯದಲ್ಲಿ ಅ. 3 ರಂದು ಮಡಿಕೇರಿಯಲ್ಲಿ ಕೊಡಗು ಜಾನಪದ ಉತ್ಸವ ಆಯೋಜಿಸಲಾಗಿದ್ದು ಬೆಳಗ್ಗೆ ಜಾನಪದ ಕಲಾಜಾಥಾ ಸೇರಿದಂತೆ ಮಧ್ಯಾಹ್ನ ಆಯೋಜಿತ ಜಾನಪದ ಕಲಾಪ್ರದರ್ಶನದಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ಜಾನಪದ ಕಲಾವಿದರಿಗೆ, ಕಲಾತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಾನಪದ ಉತ್ಸವ ಸಂಚಾಲಕ ಅನಿಲ್ ಎಚ್.ಟಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪಾಲ್ಗೊಳ್ಳಲು ಇಚ್ಚಿಸುವ ತಂಡಗಳು ತಾ. 26 ರೊಳಗಾಗಿ ಹೆಸರು ನೋಂದಾಯಿಸಲು ಸಂಪರ್ಕಿಸಬೇಕಾದ ಸಂಖ್ಯೆಗಳು. ಕೆ. ಜಯಲಕ್ಷ್ಮಿ (9663119670), ಎಂ.ಬಿ. ಜೋಯಪ್ಪ (9481016315), ಎಸ್.ಐ. ಮುನೀರ್ ಅಹಮ್ಮದ್ (9886181613).