ಮಡಿಕೇರಿ, ಸೆ. 23: ಜನಪದೀಯ ಚರಿತ್ರೆಯ ಪ್ರಕಾರ ಕೊಡವ ಬುಡಕಟ್ಟು ಕುಲವು ವಿಶೇಷ ಸಾಂಸ್ಕøತಿಕ ಒಳಕೋಶಗಳನ್ನು ಮತ್ತು ಸೂಕ್ಷ್ಮ ಸಂವೇದನೆಗಳನ್ನು ಹೊಂದಿದ್ದು ಇವೆರಡರ ಅಳಿಸಿ ಹಾಕುವಿಕೆ, ಅದರ ಮೇಲಿನ ದುರಾಕ್ರಮಣ ಅಥವಾ ಅದರ ಅಪಹರಿಸುವಿಕೆಯಂತಹ ನಡೆ ಅಪವಿತ್ರ ಮತ್ತು ಅಕ್ರಮ ಕೃತ್ಯಗಳಾಗಿವೆ. ಭೂತಾಯಿ, ತಾಯಿನೆಲ, ಯೋಧ ಬುಡಕಟ್ಟು ಸಂಸ್ಕಾರ ಮತ್ತು ಬಂದೂಕ ಸಂಪ್ರದಾಯ ಒಂದರಿಂದ ಮತ್ತೊಂದನ್ನು ಪ್ರತ್ಯೇಕಿಸಲಾಗದಂತ ಅವಿನಾಭಾವ ಸಂಬಂಧ ಹೊಂದಿದೆ. ಕೊಡವರ ಜನ್ಮನೆಲಕ್ಕೆ ಸಂವಿಧಾನದಡಿಯಲ್ಲಿ ಪ್ರತ್ಯೇಕ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು. ಕೊಡವ ಬುಡಕಟ್ಟು ಪರಂಪರೆಯನ್ನು ಸಂರಕ್ಷಿಸಲು ಸಂವಿಧಾನದ ಶೆಡ್ಯೂಲ್ ಪಟ್ಟಿಗೆ ಸೇರಿಸಬೇಕು ಮತ್ತು ಭಾರತದ ಶಸಸ್ತ್ರ ಕಾಯ್ದೆಯ ಸೆಕ್ಷನ್ 3 ಮತ್ತು 4 ರನ್ವಯ ಲೈಸನ್ಸ್ ಇಲ್ಲದೆ ಕೋವಿ ಹೊಂದಲಿರುವ ವಿಶೇಷ ಕಾಯ್ದೆ ನಿರಾತಂಕವಾಗಿ ಮುಂದುವರೆ ಯಬೇಕು. ಈ ಮೂರು ಅಂಶಗಳ ಸ್ಥಿರೀಕರಣಕ್ಕಾಗಿ ಸಿ.ಎನ್.ಸಿ. ವತಿಯಿಂದ ಸತ್ಯಾಗ್ರಹ ನಡೆಯಿತು.

ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಸತ್ಯಾಗ್ರಹ ನಡೆಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ರಾಷ್ಟ್ರಪತಿ ರಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಜ್ಞಾಪನಾ ಪತ್ರ ರವಾನಿಸಲಾಯಿತು.

ಸತ್ಯಾಗ್ರಹದಲ್ಲಿ ಸಿ.ಎನ್.ಸಿ. ಅಧ್ಯಕ್ಷ ಎನ್.ಯು ನಾಚಪ್ಪ, ಕಲಿಯಂಡ ಪ್ರಕಾಶ್, ಪುಳ್ಳಂಗಡ ನಟೇಶ್, ಬೊಟ್ಟಂಗಡ ಗಿರೀಶ್, ಚಂಬಂಡ ಜನತ್, ಬೇಪಡಿಯಂಡ ದಿನು, ಅಜ್ಜಿಕುಟ್ಟಿರ ಲೋಕೇಶ್, ಪುದಿಯೊಕ್ಕಡ ಕಾಶಿ, ಪುಟ್ಟಿಚಂಡ ಡಾನ್ ದೇವಯ್ಯ, ಮಂಡಪಂಡ ಮನೋಜ್, ಮಂದಪಂಡ ಸೂರಜ್, ಕಿರಿಯಮಾಡ ಶರಿನ್, ಕೇಚಮಾಡ ಶರತ್, ಬೊಳಜಿರ ಅಯ್ಯಪ್ಪ, ಚಂಙಂಡ ಚಾಮಿ ಪಳಂಗಪ್ಪ, ಪುಲ್ಲೆರ ಕಾಳಪ್ಪ, ನಂದಿನೆರವಂಡ ಅಪ್ಪಯ್ಯ, ಬಡುವಂಡ ವಿಜಯ, ಮಂಡಿರ ನಂದ ಮತ್ತು ಬೇಪಡಿಯಂಡ ಬಿದ್ದಪ್ಪ ಪಾಲ್ಗೊಂಡಿದ್ದರು.