ಕೂಡಿಗೆ, ಸೆ. 23: ಹುದುಗೂರಿನಿಂದ ಹಾರಂಗಿವರೆಗಿನ ರಸ್ತೆ ಯನ್ನು ಕಾಂಕ್ರೀಟೀಕರಣ ಗೊಳಿಸಬೇಕು ಎಂದು ಈ ವ್ಯಾಪ್ತಿಯ ಸಾರ್ವ ಜನಿಕರು ಆಗ್ರಹಿಸಿದ್ದಾರೆ.

ಸೋಮವಾರಪೇಟೆಯಿಂದ ಹಾರಂಗಿ ಅಣೆಕಟ್ಟೆಯನ್ನು ಸಮೀಪಿಸುವ ಮುಖ್ಯ ರಸ್ತೆಯಾದ ಹುದುಗೂರು ಹಾರಂಗಿ ರಸ್ತೆಯು ಈಗಾಗಲೇ ಕಾವೇರಿ ನೀರಾವರಿ ನಿಗಮದ ವತಿಯಿಂದ ಡಾಂಬರು ರಸ್ತೆ ನಿರ್ಮಾಣ ಕಾಮಗಾರಿ ಮಂಜೂರಾ ಗಿದ್ದು, ನೀರಿನ ಒತ್ತಡ ಮತ್ತು ಸಮರ್ಪಕ ಚರಂಡಿ ಇಲ್ಲದೇ ಇರುವ ಕಾರಣ ಡಾಂಬರು ರಸ್ತೆ ಬೇಗನೇ ಹಾಳಾಗಿದೆ. ಆದ್ದರಿಂದ ಡಾಂಬರು ರಸ್ತೆ ನಿರ್ಮಾಣಕ್ಕೆ ಮಂಜೂರಾಗಿರುವ ಈ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ನಿರ್ಮಾಣ ಮಾಡಬೇಕು ಎಂದು ಹುದಗೂರು ಗ್ರಾಮಸ್ಥರು ಹಾಗೂ ನೀರು ಬಳಕೆದಾರರ ಸಂಘದ ಅಧ್ಯಕ್ಷ ಐ.ಎಸ್. ಗಣೇಶ್ ಹಾಗೂ ಕಾಳಿಕಾಂಬ ಯುವಕ ಸಂಘದ ಅಧ್ಯಕ್ಷ ಗಿರೀಶ್, ಪ್ರಮುಖರಾದ ಬೋಜಯ್ಯ, ಗಿರಿಯಪ್ಪ, ರಾಜಣ್ಣ, ಕರಿಯಪ್ಪ, ದಿನೇಶ್, ನಿತಿನ್, ಪ್ರವೀಣ್ ಸೇರಿದಂತೆ ಈ ವ್ಯಾಪ್ತಿಯ ನೂರಾರು ರೈತರು ಆಗ್ರಹಿಸಿದ್ದಾರೆ.