ಭಾಗಮಂಡಲ, ಸೆ. 23: ಬೆಂಗಳೂರಿನ ಹೆಬ್ಬಗೋಡಿಯ ಕೆಂಪೇಗೌಡ ಒಕ್ಕಲಿಗರ ಸಂಘದ ವತಿಯಿಂದ ಇತ್ತೀಚೆಗೆ ಕೊಡಗಿನ ಕೋರಂಗಾಲ ಗ್ರಾಮದಲ್ಲಿ ಭೂಕುಸಿತಕ್ಕೆ ಸಿಲುಕಿ ಮೃತರಾದ ಬೋಳನ ಬಾಲಕೃಷ್ಣ ಮತ್ತು ಯಮುನಾ ದಂಪತಿಗಳ ಕುಟುಂಬಕ್ಕೆ ಸಹಾಯ ಹಸ್ತವನ್ನು ‘ಶಕ್ತಿ’ ವರದಿಗಾರರ ಮೂಲಕ ಹೆಬ್ಬಗೋಡಿ ಕಚೇರಿಯಲ್ಲಿ ನೀಡಲಾಯಿತು.

ನೆರವಿನ ಚೆಕ್ಕನ್ನು ಭಾಗಮಂಡಲದ ‘ಶಕ್ತಿ’ ವರದಿಗಾರ ಕುಯ್ಯಮುಡಿ ಸುನಿಲ್ ಮೃತ ದಂಪತಿಗಳ ಮಕ್ಕಳಾದ ಲಕ್ಷಿತ ಮತ್ತು ಲಿತನ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ರಾಕೇಶ್‍ಗೌಡ, ಮಾಜಿ ನಗರಸಭೆ ಉಪಾಧ್ಯಕ ವಿ.ಟಿ. ರಾಜೇಂದ್ರ, ಸಂಘದ ನಿರ್ದೇಶಕರಾದ ಅರುಣ್‍ಕುಮಾರ್, ಸುರೇಶ್, ಸಂದೀಪ್ ಕಾಂತರಾಜ್, ಹನುಮಂತ್, ಕುದುಕುಳಿ ದರ್ಶನ್, ಸಂಪತ್ ಉಪಸ್ಥಿತರಿದ್ದರು.