ಚೆಟ್ಟಳ್ಳಿ, ಸೆ. 22: ಪವಿತ್ರ ಮಕ್ಕಾಗೆ ಉಮ್ರಾಯಾತ್ರಿಗಳು ಕೈಗೊಂಡಿರುವ ಯಾತ್ರಿಗಳಿಗೆ ವೀರಾಜಪೇಟೆ ಎನ್‍ಸಿಟಿ ಎಂಟರ್‍ಪ್ರೈಸಸ್ ವತಿಯಿಂದ. ವಿಶೇಷ ಮಾಹಿತಿ ಶಿಬಿರ ಹಾಗೂ ಉಚಿತ ಕಿಟ್ ವಿತರಣೆ ಮಾಡಲಾಯಿತು.
ಡಿಎಚ್‍ಎಸ್ ಸಭಾಂಗಣದಲ್ಲಿ ನಡೆದ ಉಮ್ರಾ ವಿಶೇಷ ಶಿಬಿರ ಕಾರ್ಯಕ್ರಮದಲ್ಲಿ ಜಿಲ್ಲೆಯ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದರು. ಎನ್‍ಸಿಟಿ ಎಂಟರ್‍ಪ್ರೈಸಸ್ ಟೂರ್ಸ್ ಅಂಡ್ ಟ್ರಾವೆಲ್ಸ್ ವತಿಯಿಂದ ಉಮ್ರಾ ಯಾತ್ರೆ ಕೈಗೊಂಡಿರುವ 45 ಯಾತ್ರಿಗಳಿಗೆ ಉಮ್ರಾ ಕಿಟ್‍ಗಳನ್ನು ವಿತರಣೆ ಮಾಡಲಾಯಿತು. ಅ. 1 ರಂದು ಮೊದಲನೇ ಹಂತದಲ್ಲಿ ಉಮ್ರಾ ಕಾರ್ಯ ಮಾಡಲು ತೆರಳುವ ಯಾತ್ರಿಗಳನ್ನು ಬೀಳ್ಕೊಡಲಾಯಿತು
ಈ ಸಂದರ್ಭ ಎನ್‍ಸಿಟಿ ಎಂಟರ್‍ಪ್ರೈಸಸ್ ನ ಮುಖ್ಯಸ್ಥ ಅಕ್ಕಳತಂಡ ಮೊಯ್ದು, ಎನ್‍ಸಿಟಿ ನ್ಯೂ ಕ್ಯಾಲಿಕೆಟ್‍ನ ಮುಖ್ಯ ಕಚೇರಿಯ ವ್ಯವಸ್ಥಾಪಕ ಆರಿಫ್, ಡಿಎಚ್‍ಎಸ್‍ನ ಮುಖ್ಯಸ್ಥ ಸೂಫಿ ಹಾಜಿ, ಪ್ರಮುಖರಾದ ಅಲಿ ಉಸ್ತಾದ್, ಗುಂಡಿಗೆರೆಯ ಅಬ್ಬಾಸ್, ಕೊಟ್ಟಮುಡಿಯ ಉಮ್ಮರ್, ಅನೀಫ್ ಸೇರಿದಂತೆ ಮತ್ತಿತರರು ಇದ್ದರು.