ಗೋಣಿಕೊಪ್ಪ ವರದಿ, ಸೆ. 23 : ಅಕ್ರಮ ಮರಳು ಸಾಗಣೆ ಆರೋಪದಡಿ ಗೋಣಿಕೊಪ್ಪ ಪೊಲೀಸರು ಮರಳು ಸಮೇತ ಲಾರಿ ವಶ ಪಡಿಸಿಕೊಂಡಿದ್ದು, ಲಾರಿ ಚಾಲಕ ಸಲೀಂ (30) ಚಾಲಕ ತಪ್ಪಿಸಿಕೊಂಡಿದ್ದಾನೆ.

ಕಳೆದ ರಾತ್ರಿ ಪರವಾನಗಿ ಇಲ್ಲದೆ ಕೈಕೇರಿ ಕಡೆಯಿಂದ ಪಟ್ಟಣದತ್ತ ಬರುತ್ತಿದ್ದಾಗ ದಾಳಿ ಮಾಡಿ ವಶಕ್ಕೆ ಪಡೆಯಲಾಗಿದೆ. ಕೇರಳ ಮೂಲದ ಲಾರಿಯಾಗಿದ್ದು, ಲಾರಿಯಲ್ಲಿದ್ದವರು ತಪ್ಪಿಸಿಕೊಂಡಿರುವದರಿಂದ ಎಲ್ಲಿಂದ ತರಲಾಗಿದೆ ಎಂಬ ಮಾಹಿತಿ ಇಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಈ ಸಂದರ್ಭ ಉಪ ನಿರೀಕ್ಷಕ ಮಂಚಯ್ಯ, ಸಹಾಯಕ ನಿರೀಕ್ಷಕ ಚಂದ್ರಯ್ಯ, ಸಿಬ್ಬಂದಿ ಧನಪತಿ, ಮಂಜುನಾಥ್, ಸುನಿಲ್ ಇದ್ದರು.