ಮಡಿಕೇರಿ, ಸೆ. 23 : ಮಡಿಕೇರಿಯಲ್ಲಿ ಅ.3 ರಂದು ಜಿಲ್ಲಾ ಜಾನಪದ ಉತ್ಸವ ಸಂದರ್ಭ ಜಾನಪದ ವಸ್ತು, ಪರಿಕರಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಜಿಲ್ಲಾ ಜಾನಪದ ಪರಿಷತ್ ವತಿಯಿಂದ ಮಡಿಕೇರಿ ನಗರ ದಸರಾ ಸಮಿತಿ ಸಹಭಾಗಿತ್ವದಲ್ಲಿ ಅ.3 ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಕೊಡಗು ಜಾನಪದ ಉತ್ಸವವನ್ನು ಹಗಲಿನಲ್ಲಿ ಆಯೋಜಿಸಲಾಗಿದೆ. ಈ ಉತ್ಸವ ಸಂದರ್ಭ ಜಿಲ್ಲೆಯ ಜಾನಪದೀಯ ಸಂಗ್ರಹಕರು ತಮ್ಮಲ್ಲಿ ಸಂಗ್ರಹಿತ ಜಾನಪದ ಮೌಲ್ಯವುಳ್ಳ. ವಸ್ತು, ಪರಿಕರಗಳನ್ನು ಪ್ರದರ್ಶಿಸಬಹುದಾಗಿದೆ. ಆಸಕ್ತರು ತಾ.27 ರೊಳಗಾಗಿ ಎಂ.ಬಿ.ಜೋಯಪ್ಪ (9481016315) ಮುನೀರ್ ಅಹಮ್ಮದ್ (9886181613) ಎಸ್.ಎಸ್. ಸಂಪತ್ ಕುಮಾರ್ ( 9448614999) ಅವರಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಜಿಲ್ಲಾ ಜಾನಪದ ಉತ್ಸವ ಸಂಚಾಲಕ ಅನಿಲ್ ಎಚ್.ಟಿ. ಪ್ರಕಟಣೆಯಲ್ಲಿ ಕೋರಿದ್ದಾರೆ.