ಮಡಿಕೇರಿ, ಸೆ. 22: ಐತಿಹಾಸಿಕ ಹಿನ್ನೆಲೆಯಿರುವ ಮಡಿಕೇರಿ ದಸರಾ ಕ್ರೀಡಾಕೂಟದಲ್ಲಿ ಪ್ರತ್ಯಕ್ಷ ಪಾಲ್ಗೊಳ್ಳುವಿಕೆ; ಕ್ರೀಡಾಪಟುಗಳಲ್ಲಿನ ಸಾಧನೆಗೆ ಸ್ಫೂರ್ತಿಯಾಗಿದೆ ಎಂದು ಮಡಿಕೇರಿ ದಸರಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆಶಿಸಿದರು. ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಯಾವದೇ ಚಟುವಟಿಕೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳು ಮಾತ್ರ ಸಾಧಕರನ್ನು ಗುರುತಿಸಲು ನೀಡುವ ಬಹುಮಾನವಾಗಿದ್ದು; ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವದೇ ಸ್ಫೂರ್ತಿಯೆಂದು ನೆನಪಿಸಿದರು.ಈ ದಿಸೆಯಲ್ಲಿ ದಸರಾ ಕ್ರೀಡಾ ಸಮಿತಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಪೂರ್ಣ ಬೆಂಬಲದೊಂದಿಗೆ ಯಶಸ್ಸಿಗೆ ಅವರು ಹಾರೈಸಿದರು.ಕೊಡಗು ವೈಶಿಷ್ಟ ಜಿಲ್ಲೆ : ಕೊಡಗಿನ ನೆಲದಲ್ಲಿ ಬದುಕುವ ಪ್ರತಿಯೊಬ್ಬರಿಗೆ ಆತ್ಮಬಲದೊಂದಿಗೆ; ಯಾವದೇ ಪರಿಸ್ಥಿತಿಯನ್ನು ಎದುರಿಸುವ ಛಲವಿದ್ದು; ಅಂತಹ ಮನಃಸ್ಥಿತಿಯ ಕಾರಣ ಈ ನಾಡಿನ ಮಂದಿ ಕ್ರೀಡೆ, ಸೇನೆ ಸಹಿತ ಎಲ್ಲಾ ಕ್ಷೇತ್ರಗಳಲ್ಲಿ ಗಣನೀ ಯವಾಗಿ ತೊಡಗಿಸಿ ಕೊಂಡಿರುವದು ಶ್ಲಾಘನೀಯ ಎಂದರು.
ಶಕ್ತಿ ದೇವತೆಯ ಆರಾಧಿಸುವ ಪರಂಪರೆಯ ನವರಾತ್ರಿ ಉತ್ಸವವು; ಕೊಡಗಿಗೆ ಕಳೆದ ಎರಡು ವರ್ಷಗಳಿಂದ ಎದುರಾಗಿರುವ ಸಂಕಷ್ಟ ನಿವಾರಿಸಿ ಭವಿಷ್ಯದಲ್ಲಿ ಯಾವದೇ ಸಮಸ್ಯೆಗಳು ಎದುರಾಗದಂತೆ ಅನುಗ್ರಹಿಸಲೆಂದು ನ್ಯಾಯಾಧೀಶೆ ನೂರುನ್ನೀಸಾ ಅವರು ಆಶಿಸಿದರು.
ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ, ಕವಿಗೋಷ್ಠಿ ಸಮಿತಿ ಅಧ್ಯಕ್ಷ ಚಿ.ನಾ. ಸೋಮೇಶ್ ಅವರುಗಳು ಆಶಯ ನುಡಿಯಾಡಿ ದರು. ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಖಜಾಂಚಿ ಉಮೇಶ್ ಸುಬ್ರಮಣಿ, ಉಪಾಧ್ಯಕ್ಷ ನೆರವಂಡ ಜೀವನ್, ಕ್ರೀಡಾ ಸಮಿತಿ ಅಧ್ಯಕ್ಷ ಬಿ.ಎಂ. ಹರೀಶ್ ಸೇರಿದಂತೆ ಮಾಜಿ ನಗರಸಭಾ ಸದಸ್ಯರುಗಳಾದ ಉನ್ನಿಕೃಷ್ಣ, ಪ್ರಕಾಶ್ ಆಚಾರ್ಯ, ಸುನಿಲ್ ನಂಜಪ್ಪ, ಬಿ.ಎಂ. ರಾಜೇಶ್, ಆಯುಕ್ತ ಹಾಗೂ ಗೌರವ ಕಾರ್ಯದರ್ಶಿ ಎಂ.ಎಲ್. ರಮೇಶ್ ಮೊದಲಾದವರು ಪಾಲ್ಗೊಂಡಿದ್ದರು.(ಮೊದಲ ಪುಟದಿಂದ)
ಕ್ರೀಡಾ ಸಮಿತಿ ಪದಾಧಿಕಾರಿಗಳಾದ ಕಪಿಲ್ ಕುಮಾರ್ ಸ್ವಾಗತಿಸಿ, ತೆನ್ನಿರ ಮೈನಾ ನಿರೂಪಿಸಿ, ಪ್ರಭು ರೈ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಸೇರಿದಂತೆ ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳ ಸಹಿತ ಸಾರ್ವಜನಿಕ ಕ್ರೀಡಾ ಸ್ಪರ್ಧೆಗಳು ನಡೆಯಿತು. ಆರಂಭದಲ್ಲಿ ಮಹದೇವಪೇಟೆ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆಯೊಂದಿಗೆ ಕ್ರೀಡಾ ಜ್ಯೋತಿಯನ್ನು ಮೈದಾನಕ್ಕೆ ತರಲಾಯಿತು.
ಕ್ರೀಡಾಕೂಟದ ಫಲಿತಾಂಶ
ದಸರಾ ಪ್ರಯುಕ್ತ ನಡೆದ ವಿವಿಧ ವಿಭಾಗದಲ್ಲಿ ನಡೆದ ಕ್ರೀಡಾಕೂಟದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಯಿತು.
ಓಟದ ವಿಭಾಗ ವಿಜೇತರು : ಬಾಲಕರ 50 ಮೀಟರ್ ಓಟದ ಸ್ಪರ್ಧೆಯಲ್ಲಿ ಅಕ್ಷಯ್ ಬಿ (ಪ್ರ), ಯಶ್ವಂತ್ (ದ್ವಿ), ಜಯರಾಂ ರೈ (ತೃ), ಬಾಲಕಿಯರ ವಿಭಾಗದಲ್ಲಿ ಸೋನಿಯ (ಪ್ರ), ಶ್ರೀಯ ಕಿರಣ್ (ದ್ವಿ), ವರ್ಷಿಣಿ (ತೃ), 8 ರಿಂದ 10ನೇ ತರಗತಿಯ 400 ಮೀಟರ್ ಬಾಲಕಿಯರ ಓಟದ ಸ್ಪರ್ಧೆಯಲ್ಲಿ ತೇಜಸ್ವಿ ಕೆ ದೇವಯ್ಯ (ಪ್ರ), ಕೆ.ಟಿ ನೀತು (ದ್ವಿ), ಸುಶ್ಮಿತಾ ಎಂ.ಡಿ (ತೃ), ಬಾಲಕರ ವಿಭಾಗದಲ್ಲಿ ಸುಹಾನ್ ಬಿ.ಆರ್ (ಪ್ರ), ಲೇಖನ್ (ದ್ವಿ), ದೀಪಕ್ (ತೃ), ಸಾಮಾನ್ಯ ಪುರುಷರ ವಿಭಾಗದಲ್ಲಿ ಪುನೀತ್ (ಪ್ರ), ಮೇದಪ್ಪ (ದ್ವಿ), ಕಬೀರ್ (ತೃ), ಮಹಿಳೆಯರ ವಿಭಾಗದಲ್ಲಿ ವಿದ್ಯಾಶ್ರೀ (ಪ್ರ), ಧನ್ಯ (ದ್ವಿ), ಐಶ್ವರ್ಯ (ತೃ), 4 ರಿಂದ 5ನೇ ತರಗತಿಯ 75 ಮೀಟರ್ ಓಟದ ವಿಭಾಗದಲ್ಲಿ ಶ್ರೇಯಸ್ (ಪ್ರ), ದೀಪಕ್ (ದ್ವಿ), ಅರುಷ್ (ತೃ), 6 ರಿಂದ 7ನೇ ತರಗತಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಕುಸುಮ (ಪ್ರ), ಪ್ರಾಪ್ತಿ (ದ್ವಿ), ಗಗನ (ತೃ), 100 ಮೀಟರ್ ಮಹಿಳೆಯರ ಓಟದಲ್ಲಿ ಧನ್ಯ (ಪ್ರ), ಪ್ರಿಯಾ (ದ್ವಿ), ವಸಂತ (ತೃ), ಪತ್ರಕರ್ತರ ವಿಭಾಗದ 100 ಮೀಟರ್ ಓಟದಲ್ಲಿ ವಿಘ್ನೇಶ್ ಭೂತನಕಾಡು (ಪ್ರ), ಆದರ್ಶ್ (ದ್ವಿ), ವಿನು ಕುಶಾಲಪ್ಪ (ತೃ), 6 ಮತ್ತು 7ನೇ ತರಗತಿಯ ಬಾಲಕಿಯರ ಓಟದಲ್ಲಿ ಕುಸುಮ (ಪ್ರ), ಪ್ರಾಪ್ತಿ ರೈ (ದ್ವಿ), ಗಗನ (ತೃ), ಬಾಲಕರ ವಿಭಾಗದಲ್ಲಿ ವಿಜಾಲ್ ಆಹ್ಮದ್ (ಪ್ರ), ಆಕಾಶ್ (ದ್ವಿ), ದೀಕ್ಷಿತ್ (ತೃ), 8 ರಿಂದ 10ನೇ ತರಗತಿ ಬಾಲಕಿಯರ 400 ಮೀಟರ್ ಓಟದಲ್ಲಿ ತೇಜಸ್ವಿ (ಪ್ರ), ನೀತು (ದ್ವಿ), ಸುಶ್ಮಿತಾ (ತೃ), ಬಾಲಕರ ವಿಭಾಗದಲ್ಲಿ ಸೋಂಕನ್ (ಪ್ರ), ಲೇಖನ್ (ದ್ವಿ), ದೀಪಕ್ (ತೃ), 6 ಮತ್ತು 7ನೇ ತರಗತಿ 100 ಮೀಟರ್ ಬಾಲಕರ ಓಟದಲ್ಲಿ ನಿಸಾರ್ ಅಹ್ಮದ್ (ಪ್ರ), ಉರುದವಳ್ಳಿ ಚೇತನ್ (ದ್ವಿ), ಅಭಿಷೇಕ್ (ತೃ), 8 ರಿಂದ 10ನೇ ತರಗತಿ ಓಟದಲ್ಲಿ ಲೇಖನ್ (ಪ್ರ), ಸಂತಂ (ದ್ವಿ), ವಿಜಯ (ತೃ), 1 ರಿಂದ 3ನೇ ತರಗತಿ 75ಮೀ ಬಾಲಕ ಓಟದಲ್ಲಿ ಅನುಲ್ (ಪ್ರ), ಆರ್ಯನ್ (ದ್ವಿ), ಶಿಶಿರ್ (ತೃ), ಬಾಲಕಿಯರ ವಿಭಾಗದಲ್ಲಿ ಭಿಯೋಲ್(ಪ್ರ), ಖುಷಿ (ದ್ವಿ), ಅನನ್ಯ (ತೃ), ಪ್ರೌಢಶಾಲಾ ವಿಭಾಗ 100 ಮೀ ಬಾಲಕರ ವಿಭಾಗದಲ್ಲಿ ಲೇಖನ್ (ಪ್ರ), ಸಹಂ (ದ್ವಿ), ವಿಜಯ್ (ತೃ), 6 ಮತ್ತು 7ನೇ ತರಗತಿ ಬಾಲಕರ ವಿಭಾಗದಲ್ಲಿ ನಿಸಾರ್ ಅಹ್ಮದ್ (ಪ್ರ), ಉರದವಳ್ಳಿ ಜೀವಿತ್ (ದ್ವಿ), ಅಭಿಷೇಕ್ (ತೃ), 1 ರಿಂದ 3ನೇ ತರಗತಿ 15ಮೀಟರ್ ಓಟದಲ್ಲಿ ಅನುಲ್ ರೈ (ಫ್ರ), ಆರ್ಯನ್ (ದ್ವಿ), ಅಭಿಷೇಕ್ (ತೃ) ಸ್ಥಾನ ಪಡೆದುಕೊಂಡರು.
ಹಿರಿಯ ನಾಗರಿಕರಿಗೆ ನಡೆದ ನಡಿಗೆ ಸ್ಪರ್ಧೆಯಲ್ಲಿ ಮಡಿಕೇರಿಯ ರವಿ ರೈ (ಪ್ರ), ಸೈಮನ್ (ದ್ವಿ), ಲಕ್ಷ್ಮಣ್ ಸಿಂಗ್ (ತೃ), ಮಹಿಳೆಯರ ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ರೇಷ್ಮಾ ಕೆ ದೇವಯ್ಯ (ಪ್ರ), ಸೀತಮ್ಮ (ದ್ವಿ), ತೇಸ್ವಿ ಕೆ ದೇವಯ್ಯ ಪತ್ರಕರ್ತರ ವಿಭಾಗದಲ್ಲಿ ವಿನು ಕುಶಾಲಪ್ಪ (ಪ್ರ), ಆದರ್ಶ್ (ದ್ವಿ), ಲೋಕೇಶ್ ಕಾಟಕೇರಿ (ತ್ರ),), 6 ವರ್ಷದ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆಯಲ್ಲಿ ಚಾರ್ವಿ ಪ್ರಸಾದ್, (ಪ್ರ), ಆರಾದ್ಯ (ದ್ವಿ), ನಿಶ್ಚಲ್ (ತೃ), ಕಪ್ಪೆ ಜಿಗಿತದಲ್ಲಿ ಆರಾದ್ಯ (ಪ್ರ), ಆರಾಧ್ಯ (ದ್ವಿ), ಚಾರ್ವೀ ಪ್ರಸಾದ್ (ತೃ) ಸ್ಥಾನ ಗಳಿಸಿಕೊಂಡರು.