ಮಡಿಕೇರಿ, ಸೆ. 22: ಸ್ವಾತಂತ್ರ್ಯೋತ್ಸವ ಪ್ರಯುಕ್ತ ಗೌಡ ಜನಾಂಗದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೊಡಗು ಗೌಡ ವಿದ್ಯಾಸಂಘದ ವತಿಯಿಂದ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ವಿದ್ಯಾಸಂಘದ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಸ್ಪರ್ಧೆಗೆ ಆಗಮಿಸಿದ್ದ ಪುಟಾಣಿ ಮಕ್ಕಳಿಂದ ಉದ್ಘಾಟಿಸಲಾಯಿತು.

ಈ ಸಂದರ್ಭ ವಿದ್ಯಾಸಂಘದÀ ಉಪಾಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ, ಕಾರ್ಯದರ್ಶಿ ಕೊಟ್ಟಕೇರಿಯನ ದಯಾನಂದ, ಸಹಕಾರ್ಯದರ್ಶಿ ತಳೂರು ದಿನೇಶ್‍ಕುಮಾರ್, ಖಜಾಂಚಿ ಕಟ್ಟೆಮನೆ ಸೋನಾಜಿತ್, ನಿರ್ದೇಶಕರುಗಳಾದ ದೇವಂಗೋಡಿ ಹರ್ಷ, ಪಾಣತ್ತಲೆ ಮಂದಪ್ಪ, ಕೆದಂಬಾಡಿ ಕೀರ್ತಿಕುಮಾರ್, ಹುದೇರಿ ಜಗದೀಶ್, ಪೊಕ್ಕುಳಂಡ್ರ ಮನೋಜ್, ಕುದುಪಜೆ ಬೋಜಪ್ಪ, ಕಾಳೇರಮ್ಮನ ಎನ್. ಲತ, ಚೆರಿಯಮನೆ ರೋಹಿಣಿ, ವ್ಯವಸ್ಥಾಪಕ ಮತ್ತಾರಿ ರಮೇಶ್ ಇದ್ದರು. ನಿರ್ದೇಶಕರುಗಳಾದ ಪರಿಚನ ಸತೀಶ್ ಹಾಗೂ ಕೆದಂಬಾಡಿ ಕಾಂಚನ ಕಾರ್ಯ ನಡೆಸಿಕೊಟ್ಟರು.ಎಲ್‍ಕೆಜಿಯಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಛದ್ಮವೇಷ, ಚಿತ್ರಕಲೆ, ಸಾಮಾನ್ಯ ಜ್ಞಾನ, ಭಾಷಣ ಸ್ಪರ್ಧೆ ಹಾಗೂ ಸ್ಪರ್ಧಾಳುಗಳ ಪೋಷಕರಿಗೆ ಸೋಬಾನೆ ಹಾಡು ಸ್ಪರ್ಧೆಗಳು ನಡೆದವು. ತೀರ್ಪುಗಾರರಾಗಿ ಫೀ.ಮಾ. ಕಾರ್ಯಪ್ಪ ಕಾಲೇಜಿನ ಉಪನ್ಯಾಸಕಿ ದೇಲಂಪಾಡಿ ರಮ್ಯ, ರಂಗಭೂಮಿ ಕಲಾವಿದ ಊರುಬೈಲು ಲೋಕೇಶ್, ಶಿಕ್ಷಕ, ಕಲಾವಿದ ತೆಕ್ಕಡೆ ಕುಮಾರಸ್ವಾಮಿ, ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾಗಿ ಟ್ಯಾಟ್ಟೂ ಕಲಾವಿದ ಮೂಡಗದ್ದೆ ಕೌಶಿಕ್ ಹಾಗೂ ಭಾಗಮಂಡಲ ಪ್ರಾಥಮಿಕ ಶಾಲಾ ಶಿಕ್ಷಕಿ ಕೆ.ಎಸ್. ಇಂದ್ರಾಣಿ ಅವರುಗಳು ಕಾರ್ಯನಿರ್ವಹಿಸಿದರು. ವಿಜೇತರಾದ ಸ್ಪರ್ಧಾಳುಗಳಿಗೆ ಮುಂದೆ ನಡೆಯುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಗುವದು.

(ಮೊದಲ ಪುಟದಿಂದ)

ವಿಜೇತರ ವಿವರ

ಛದ್ಮವೇಷ: ಪ್ರ. ಪರಿಚನ ಜನ್ಯ,ದ್ವಿತೀಯ ಹಾರ್ದಿಕ್ ಎಸ್.ಟಿ., ತೃ. ಚಿರಾಗ್ ಅಯ್ಯಪ್ಪ.

ಭಾಷಣ ಸ್ಪರ್ಧೆ: ಪ್ರ. ಕೇಡನ ಪ್ರಗತಿ, ದ್ವಿ. ತಳೂರು ವಿಕ್ರಮ್ ಕರುಂಬಯ್ಯ, ತೃ. ಸುಳ್ಯಕೋಡಿ ಹರ್ಷಿತ.

ಸೋಬಾನೆ ಸ್ಪರ್ಧೆ: ಪ್ರ. ಕಾಳೇರಮ್ಮನ ರಶಿ ಅಶೋಕ್,ದ್ವಿ. ಕುದುಪಜೆ ಮಹಾಲಕ್ಷ್ಮಿ, ತೃ. ನಡುಗಲ್ ಜಾನ್ಸಿ ಮತ್ತು ಕೋಳಿಬೈಲು ಗಂಗಮ್ಮ.

ಚಿತ್ರಕಲೆ ಸ್ಪರ್ಧೆ: ಪ್ರ. ನಾರ್ಕೋಡಿ ಕುಶ್ಮಿತ್, ದ್ವಿ. ಕಾನಡ್ಕ ದರ್ಶಿನಿ ಮತ್ತು ಮೋಂಟಡ್ಕ ಎಂ ಕಿರಣ್, ತೃ. ಮಂದ್ರೀರ ಎಂ ಕಾವೇರಿ ಮನೋಜ್.

ಸಾಮಾನ್ಯ ಜ್ಞಾನ: ಪ್ರ. ಹೃತ್ಪೂರ್ವಕ್ ಕೋರನ, ದ್ವಿ. ಶೃಂಗ ಆನಂದ್ ಕರಂದ್ಲಾಜೆ, ತೃ. ಪೂರ್ವಿಕ್ ಎ. ಕೂಡಕಂಡಿ.