ವೀರಾಜಪೇಟೆ, ಸೆ. 14: ಕೂರ್ಗ್‍ಮಾಕ್ರ್ಸ್‍ಮೆನ್ ವೀರಾಜಪೇಟೆ ಇವರ ವತಿಯಿಂದ 7ನೇ ವರ್ಷದ ಕೈಲ್‍ಮುಹೂರ್ತ ಹಬ್ಬದ ಪ್ರಯುಕ್ತ ತೆಂಗಿನಕಾಯಿಗೆ ಗುಂಡುಹೊಡೆಯುವ ಸ್ಪರ್ಧೆಯು ತಾ. 15ರಂದು (ಇಂದು) ಮಧ್ಯಾಹ್ನ 2 ಗಂಟೆಗೆ ವೀರಾಜಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ವೀರಾಜಪೇಟೆಯ ಡಿವೈಎಸ್ಪಿ ಜಯಕುಮಾರ್ ಮತ್ತು ಜೂನಿಯರ್ ಕಾಲೇಜು ಪ್ರಾಂಶುಪಾಲರಾದ ತಾತಂಡ ಜ್ಯೋತಿ ಪ್ರಕಾಶ್ ಭಾಗವಹಿಸಲಿದ್ದಾರೆ.