ಮಡಿಕೇರಿ, ಸೆ. 14: ಮೈಸೂರಿನ ರಾಕಿಂಗ್ ರಾತು ಮಾಡೆಲ್ ಮೇನೇಜ್‍ಮೆಂಟ್ ಆಯೋಜಿಸಿದ್ದ ‘ಮಿಸೆಸ್ ಕರ್ನಾಟಕ’ ಸೌಂದರ್ಯ ಸ್ಪರ್ಧೆಯಲ್ಲಿ ಜಿಲ್ಲೆಗೆ ಸನಿಹದ ಅರಂತೋಡುವಿನ ದೀಪಿಕಾ ಅಡ್ತಲೆ ಅವರು ಪ್ರಶಸ್ತಿ ಗೆದ್ದು; ‘ಮಿಸೆಸ್ ಕರ್ನಾಟಕ’ ಆಗಿ ಮೂಡಿ ಬಂದಿದ್ದಾರೆ. ಅರಂತೋಡಿನ ನಿವೃತ್ತ ಮುಖ್ಯೋಪಾಧ್ಯಾಯ ಜಯರಾಮ ಅಡ್ತಲೆ ಮತ್ತು ಯಶೋದಾ ಅವರ ಪುತ್ರಿಯಾಗಿರುವ ದೀಪಿಕಾ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ಪ್ರಸ್ತುತ ಬೆಂಗಳೂರಿನ ಕೆ.ಪಿ.ಎಂ.ಜಿ. ಕಂಪೆನಿಯಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಹಾಗೂ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪತಿ ದಯಾಗೌಡ ಹಾಗೂ ಪುತ್ರನೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಭರತನಾಟ್ಯ ಪ್ರವೀಣೆಯಾಗಿರುವ ದೀಪಿಕಾ, ಯಕ್ಷಗಾನ, ಪಾಶ್ಚಾತ್ಯ ನೃತ್ಯ, ಸಾಲ್ಸಾ, ಕಂಟೆಂಪರರಿ ಹಾಗೂ ಹಿಪ್‍ಹಾಪ್ ನೃತ್ಯಗಳಲ್ಲೂ ಪರಿಣಿತರಾಗಿದ್ದಾರೆ. ಶಾಲಾ - ಕಾಲೇಜುಗಳಲ್ಲಿ ಕ್ರೀಡಾಪಟು ಕೂಡ ಆಗಿದ್ದರು.