ಮಡಿಕೇರಿ, ಸೆ. 21 : ಕೊಡವ ಮಕ್ಕಡ ಕೂಟ ಮತ್ತು ಅಖಿಲ ಕೊಡವ ಸಮಾಜ ಪೆÇಮ್ಮಕ್ಕಡ ಪರಿಷತ್ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ಆರು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.

ಬಾಚರಣಿಯಂಡ ರಾಣು ಅಪ್ಪಣ್ಣ ಅವರು ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ರಚಿಸಿರುವ ‘ಕರಗಿದ ಬದುಕು’ (ಕನ್ನಡ), ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮರೆಯಾಗುತ್ತಿರುವ ನಮ್ಮ ಭಾಷೆ, ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ವಿವಿಧ ಸಂಘಟನೆಗಳು ಆಸಕ್ತಿ ತೋರುತ್ತಿರುವದು ಶ್ಲಾಘನೀಯ ವೆಂದರು.

ಕೊಡವರು ಪ್ರಕೃತಿಯನ್ನು ಆರಾಧಿಸುವವರು, ತಂದೆ, ತಾಯಿಯರನ್ನು ದೇವರು ಎಂದು ಕಾಣುತ್ತಿರುವವರು. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಹಾಗೂ ಸಾಂಸ್ಕøತಿಕ ಬದಲಾವಣೆಗಳಾಗುತ್ತಿದ್ದು, ಇದು ಜನಾಂಗದ ನಾಶಕ್ಕೆ ಮುಖ್ಯ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಬಾಚರಣಿಯಂಡ ಅಪ್ಪಣ್ಣ ಅವರು ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಬರೆದಿರುವ ‘ವಿಧಿರ ಕಳಿಲ್’ ಪುಸ್ತಕವನ್ನು ಬಿಡುಗಡೆ ಗೊಳಿಸಿ ಮಾತನಾಡಿ ಕೊಡವ ಭಾಷೆಯನ್ನು ವಿದ್ಯಾರ್ಥಿಗಳಿಗೆ ಕಲಿಸುವಂತಾಗಬೇಕು ಎಂದರು. ಕೊಡವ ಪುಸ್ತಕವನ್ನು ರಚಿಸುವಾಗ ಅವುಗಳಲ್ಲಿ ಅಕ್ಷರಗಳನ್ನು ತಪ್ಪಾಗಿ ಮುದ್ರಣ ಮಾಡಬಾರದು. ಇದರಿಂದ ಭಾಷೆ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತದೆ ಎಂದರು.

ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರು ಉಳುವಂಗಡ ಕಾವೇರಿ ಉದಯ ಬರೆದಿರುವ ‘ಪುಣ್ಯಮಂದಿರ್’ (ಹಿಂದಿ) ಪುಸ್ತಕ ವನ್ನು ಬಿಡುಗಡೆಗೊಳಿಸಿ ಮಾತನಾಡಿ, ತಮ್ಮ ಸಿನಿ ಜೀವನದ ಬಗ್ಗೆ ಅನುಭವ ಹಂಚಿಕೊಂಡರು.

ಉಳುವಂಗಡ ಕಾವೇರಿ ಉದಯ ಅವರು ಮುಕೋಂಡ ಪುಷ್ಪ ಪೂಣಚ್ಚ ಬರೆದಿರುವ ‘ಆರೋಗ್ಯ ಮತ್ತು ಸಾಮಾನ್ಯ ರೋಗಗಳಿಗೆ ಗೃಹ ಚಿಕಿತ್ಸೆ’ ಪುಸ್ತಕವನ್ನು ಬಿಡುಗಡೆಗೊಳಿಸಿ, ಸಾಹಿತ್ಯವನ್ನು ಬೆಳೆಸಲು ಎಲ್ಲರೂ ಮುಂದಾಗಬೇಕು ಎಂದರು.

ಮೂಕೊಂಡ ಪುಷ್ಪಾಪೂಣಚ್ಚ ಅವರು, ಉಳುವಂಗಡ ಕಾವೇರಿ ಉದಯ ರಚಿಸಿರುವ ‘ಮ್ಯೂಸಿಕಲ್ ಸ್ಟಾರ್ಸ್ ಆಫ್ ಕೂರ್ಗ್’ (ಇಂಗ್ಲಿಷ್) ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿ, ಕೊಡಗಿನ ಜನ ಆರಾಧಿಸುವ ಪ್ರಕೃತಿಯಲ್ಲಿ ಆರೋಗ್ಯ ಕಾಪಾಡುವ ಗಿಡಮೂಲಿಕೆಗಳಿದ್ದು, ಇವುಗಳನ್ನು ಸದುಪಯೋಗಪಡಿಸಿ ಕೊಳ್ಳಬೇಕೆಂದು ಸಲಹೆ ನೀಡಿದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಬಾಚರಣಿಯಂಡ ಅಪ್ಪಣ್ಣ ಹಾಗೂ ರಾಣು ಅಪ್ಪಣ್ಣ ಬರೆದಿರುವ ‘ಪೆÇಂಜಂಗ್’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೊಡವ ಮಕ್ಕಡ ಕೂಟದ ಸದಸ್ಯರು, ಅಖಿಲ ಕೊಡವ ಸಮಾಜದ ಪೆÇಮ್ಮಕ್ಕಡ ಪರಿಷತ್ ಅಧ್ಯಕ್ಷರು, ಸದಸ್ಯರು ಹಾಗೂ ಪೊಮ್ಮಕ್ಕಡ ಕೂಟದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.

ಬಾಳೆಯಡ ದಿವ್ಯಾ ಮಂದಪ್ಪ ನಿರೂಪಿಸಿ, ಮಂಡೇಪಂಡ ಗೀತಾ ಮಂದಣ್ಣ ವಂದಿಸಿದರು.

ಮಾದೇಟಿರ ಪ್ರಮೀಳಾ ಜೀವನ್, ಅಪ್ಪಚಟ್ಟೋಳಂಡ ಪ್ರತಿಮ ಹಾಗೂ ಬೊಳ್ಳಜಿರ ಯಮುನಾ ಅಯ್ಯಪ್ಪ ಅವರುಗಳ ಹಾಡುಗಾರಿಕೆ ಗಮನ ಸೆಳೆಯಿತು.

ಸಭಾ ಕಾರ್ಯಕ್ರಮದ ನಂತರ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಆರತಿ ಪ್ರಥಮ, ವಸಂತಿ ಪೂಣಚ್ಚ ದ್ವಿತೀಯ, ಅಜ್ಜಿನಂಡ ಶ್ವೇತ ತೃತೀಯ ಬಹುಮಾನ ಪಡೆದುಕೊಂಡರು.

ಪಿಕ್ ಅಂಡ್ ಸ್ಪೀಚ್ ಸ್ಪರ್ಧೆಯಲ್ಲಿ ಅನಿತಾ ದೇವಯ್ಯ ಪ್ರಥಮ, ರೇಖಾ ತಮ್ಮಯ್ಯ ದ್ವೀತಿಯ, ಅಂಜಪರವಂಡ ಉಷಾ ತೃತೀಯ ಬಹುಮಾನ ಗಳಿಸಿದರು.