*ಗೋಣಿಕೊಪ್ಪಲು, ಸೆ. 21 : ಮಹಿಳಾ ದಸರಾವನ್ನು ವಿಭಿನ್ನ ಮತ್ತು ವಿಶಿಷ್ಟ ರೀತಿಯಲ್ಲಿ ಆಚರಿಸಲು ಮೂಲ ಸಂಸ್ಥೆ ಶ್ರೀ ಕಾವೇರಿ ದಸರಾ ಸಮಿತಿಯ ಅಧೀನದಲ್ಲಿ ಶ್ರೀ ಕಾವೇರಿ ಮಹಿಳಾ ದಸರಾ ಸಮಿತಿಯಿಂದ ಮಹಿಳೆಯರಿಗೆ ಮನೋರಂಜನೆಯ ಕಾರ್ಯಕ್ರಮವನ್ನು ನೀಡಲು ಚಿಂತನೆ ನಡೆಸಿದೆ ಎಂದು ಸಮಿತಿ ಅಧ್ಯಕ್ಷೆ ನೂರೇರ ರತಿ ಅಚ್ಚಪ್ಪ ತಿಳಿಸಿದ್ದಾರೆ.
ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ದಸರಾ ಪದಾಧಿಕಾರಿ ಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವದೇ ಬಿನ್ನಾಭಿಪ್ರಾಯ ಗಳಿಲ್ಲದೆ ಮಹಿಳೆಯರನ್ನು ಒಟ್ಟು ಗೂಡಿಸಿ ಮಹಿಳಾ ದಸರಾ ನಡೆಸಲಾಗುವದು. ಮಹಿಳೆಯರಿಗಾಗಿ ವಿಭಿನ್ನ ಕಾರ್ಯಕ್ರಮಗಳನ್ನು ಆಚರಿಸಲಾಗುವದು. ಮಹಿಳೆಯರು ಒಗ್ಗಟ್ಟಿನಿಂದ ಮನಸ್ತಾಪವನ್ನು ಬಿಟ್ಟು ಮಹಿಳಾ ದಸರಾದಲ್ಲಿ ಭಾಗಿಯಾಗ ಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ಕಾವೇರಿ ಮಹಿಳಾ ದಸರಾ ಕಾರ್ಯಕಾರಿಣಿ ಮಂಡಳಿಯ ಗೌರವಾಧ್ಯಕ್ಷರಾಗಿ ಕೊಣಿಯಂಡ ಬೋಜಮ್ಮ ಉತ್ತಪ್ಪ, ಉಪಾಧಕ್ಷರಾಗಿ ರಾಣಿ ನಾರಾಯಣ, ಪ್ರಧಾನ ಕಾರ್ಯದರ್ಶಿಯಾಗಿ ಮನೆಯಪಂಡ ಶೀಲಾ ಬೋಪಣ್ಣ, ಕಾರ್ಯದರ್ಶಿಯಾಗಿ ಧನಲಕ್ಷ್ಮಿ ಸುಬ್ರಮಣಿ, ಖಜಾಂಚಿ ಮಾಚಿಮಾಡ ಅನಿತಾಚಂಗಪ್ಪ ಇವರುಗಳನ್ನು ಆಯ್ಕೆ ಮಾಡಲಾಯಿತು. ಸಲಹಾ ಸಮಿತಿಗೆ ಕಾವ್ಯ ಸಿ.ಎಸ್, ಕಾವ್ಯಮಧುಕುಮಾರ್, ರೀನಾರಾಜೀವ್, ರಮ್ಯಗಣೇಶ್, ರೋಹಿಣಿದೇವರಾಜ್, ವೇದಿಕೆ ಸಮಿತಿಗೆ ರೇಖಾಶ್ರೀಧರ್, ರಮ್ಯಗಣೇಶ್, ಸುಶೀಲಾಹರೀಶ್, ಕವಿತಾಬೋಜಮ್ಮ, ಯಾಸ್ಮಿನ್, ಸುಲೈಖಾ, ಸ್ವಾಗತ ಸಮಿತಿಗೆ ಸಾವಿತ್ರಿ, ಸಾಹಿನ, ಧನ್ಯರವೀಂದ್ರ, ಜಮುನಾ, ಅನುಪಮ, ಅನೀಲ, ಆಹಾರ ಸಮಿತಿಗೆ ಶಾಂತಿ ಕೆ.ಆರ್. ಧನಲಕ್ಷ್ಮಿ, ಮಂಜುಳ, ವಿಮಲ, ರೋಹಿಣಿ, ರಮ್ಯ ಆಶಾಪ್ರಕಾಶ್, ಕ್ರೀಡಾ ಸಮಿತಿಗೆ ಪ್ರಭಾವತಿ, ಮಮಿತಾ, ಬೀನಾ, ಸರಸ್ವತಿ, ಅಶ್ವಿನಿ, ಸಾಂಸ್ಕೃತಿಕ ಸಮಿತಿಗೆ ವಾಮನ, ಸರಳ, ಗೀತಾ, ಲೀನಾ, ಆರ್ಥಿಕ ಸಮಿತಿಗೆ ಯಮುನಾ ಚಂಗಪ್ಪ, ರೇಖಾ ಶ್ರೀಧರ್, ಉರ್ಮಿಳಾ, ರಾಣಿನಾರಯಣ್, ರೀನಾ ಉಮೇಶ್, ಸಂಘಟನಾ ಮಂಡಳಿಗಳಿಗೆ ಪಂಕಜ ಬಾಲಕೃಷ್ಣ, ರೀನಾ ರಾಜೀವ್, ರೋಹಿಣಿ ದೇವರಾಜ್, ಶಾಂತಿ. ಕೆ.ಆರ್ ಇವರುಗಳನ್ನು ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನಾಗಿ ನೇಮಿಸಲಾಯಿತು. ಮಹಾ ಪೆÇೀಷಕರಾಗಿ ಬೊಳ್ಳಚಂಡ ಸ್ಮಿತಾ ಪ್ರಕಾಶ್, ಚೇಂದಂಡ ಸುಮಿ ಸುಬ್ಬಯ್ಯ, ಸೆಲ್ವಿ, ಭವ್ಯ ರವಿ, ಶ್ರೀಜಾ ಸಾಜಿ, ಸುಮಾ, ಶರೀನ್ ಸುಬ್ಬಯ್ಯ, ರೀನಾಪ್ರಕಾಶ್, ಕಾಂತಿ ಸತೀಶ್, ಮನೆಯಪಂಡ ದೇಚಮ್ಮ ಇವರುಗಳು ಆಯ್ಕೆಯಾದರು.