ಸೋಮವಾರಪೇಟೆ, ಸೆ.21: ಸಮೀಪದ ಕುಂದಳ್ಳಿ ಗ್ರಾಮದ ನಿರ್ಜನ ಪ್ರದೇಶ ಹಾಗೂ ಪಾಳುಬಿದ್ದ ಜಾಗದಲ್ಲಿ ಅಕ್ರಮವಾಗಿ ಹಲಸು ಮರದ ನಾಟಾಗಳನ್ನು ದಾಸ್ತಾನು ಮಾಡಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಸೋಮವಾರಪೇಟೆ ಅರಣ್ಯಾಧಿಕಾರಿಗಳ ತಂಡ, ಸುಮಾರು 50 ಸಾವಿರ ಮೌಲ್ಯದ ಹಲಸಿನ ಮರದ ನಾಟಾಗಳನ್ನು ವಶಕ್ಕೆ ಪಡೆದಿದೆ.ಕುಂದಳ್ಳಿ ಗ್ರಾಮದಲ್ಲಿ ತೋಳೂರು ಶೆಟ್ಟಳ್ಳಿಯ ಟಿ.ಕೆ. ಕಾಂತರಾಜು ಎಂಬಾತ ಅಕ್ರಮವಾಗಿ ಅರಣ್ಯ ಪ್ರದೇಶದಿಂದ ಹಲಸಿನ ಮರಗಳನ್ನು ಕಡಿದು, ನಾಟಾಗಳನ್ನಾಗಿ ಪರಿವರ್ತಿಸಿ, ಅರಣ್ಯ ಇಲಾಖೆಯವರು ಬಳಸುವ ಛಾಪಾ ಗುರುತುಗಳನ್ನು ನಕಲಿ ಮಾಡಿ ಸಾಗಾಟಕ್ಕೆ ಯತ್ನಿಸುತ್ತಿದ್ದ ಸಂದರ್ಭ ಅರಣ್ಯ ಇಲಾಖಾ ಅಧಿಕಾರಿಗಳು ಧಾಳಿ ನಡೆಸಿದ್ದಾರೆ.ಈ ಸಂದರ್ಭ ಆರೋಪಿ ಕಾಂತರಾಜು ಸ್ಥಳದಿಂದ ಪರಾರಿ ಯಾಗಿದ್ದು, ನಾಟಾಗಳನ್ನು ದಾಸ್ತಾನು ಮಾಡಲಾಗಿದ್ದ ಜಾಗದ ಮಾಲೀಕರಾದ ನಾಗರಾಜು ಅವರನ್ನು ಅರಣ್ಯಾಧಿಕಾರಿ ಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ವಲಯ ಅರಣ್ಯಾಧಿಕಾರಿ ಶಮಾ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಬಿ.ಎಸ್. ಚಂದ್ರೇಶ್, ಅರಣ್ಯ ರಕ್ಷಕ ಭರಮಪ್ಪ,

ಸಿಬ್ಬಂದಿ ರಮೇಶ್ ಅವರುಗಳು ಭಾಗವಹಿಸಿದ್ದರು.