ಮಡಿಕೇರಿ, ಸೆ. 20: ಕಳೆದ ವರ್ಷ ಕುಸಿತ ಕಂಡಿದ್ದ ಹಳೇ ಖಾಸಗಿ ಬಸ್ ನಿಲ್ದಾಣ ಜಾಗವನ್ನು ಶಾಸಕ ಅಪ್ಪಚ್ಚು ರಂಜನ್ ಪರಿಶೀಲಿಸಿದರು. ಅರ್ಧನಿಂತ ತಡೆಗೋಡೆ ಕಾಮಗಾರಿ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ಸಂದರ್ಭ ‘ಶಕ್ತಿ’ಯೊಂದಿಗೆ ಮಾತನಾಡಿದ ಶ್ರೀಯುತರು, ಹಿಂದೆ 1.25 ಕೋಟಿ ರೂ. ವೆಚ್ಚದಲ್ಲಿ ರೂಪಿಸಿದ್ದ ಯೋಜನೆ ಈ ಮಣ್ಣಿಗೆ ಆಗುವದಿಲ್ಲವೆಂದರು; ಆ ತಂತ್ರಜ್ಞಾನದಲ್ಲಿ ತಡೆಗೋಡೆ ನಿರ್ಮಿಸಿ ದರೆ, ಅದು ಮತ್ತೆ ಬೀಳುವದು ಖಚಿತ ಎಂದು ಅಭಿಪ್ರಾಯಪಟ್ಟ ಶಾಸಕರು, ಇದಕ್ಕಾಗಿ 3.5 ಕೋಟಿ ರೂ. ವೆಚ್ಚದ ಹೊಸ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಮುಂದಿನ ಮೇ ಒಳಗೆ ಕಾಮಗಾರಿ ಮುಕ್ತಾಯ ವಾಗಲಿದೆ ಎಂದರು. ನಗರಸಭಾ ಆಯುಕ್ತ ರಮೇಶ್, ಇಂಜಿನಿಯರ್ ಹೇಮಕುಮಾರ್ ಹಾಗೂ ಇತರರು ಭೇಟಿ ಸಂದರ್ಭ ಹಾಜರಿದ್ದರು. ಜಿಲ್ಲಾಧಿಕಾರಿ ಪ್ರತಿಕ್ರಿಯೆಇಂದು ಬೆಳಿಗ್ಗೆ ‘ಶಕ್ತಿ’ ಜಿಲ್ಲಾಧಿಕಾರಿ ಗಳನ್ನು ಭೇಟಿ ಮಾಡಿ ಆಸ್ತಿ ತೆರಿಗೆ ಸಮಸ್ಯೆ ವಿವರಿಸಿದ ಸಂದರ್ಭ ಬಸ್ ನಿಲ್ದಾಣ ತಡೆಗೋಡೆ ಬಗ್ಗೆ ಅವರು ಪ್ರಸ್ತಾಪಿಸಿದರು. ಈ ಹಿಂದಿನ ಅಂದಾಜು ಪಟ್ಟಿ ಹಾಗೂ ಕಾಮಗಾರಿ ಮಾದರಿ ಬಗ್ಗೆ ತಂತ್ರಜ್ಞರೊಂದಿಗೆ ಚರ್ಚಿಸಿದ (ಮೊದಲ ಪುಟದಿಂದ) ಸಂದರ್ಭ ಅದು ಸೂಕ್ತವಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ ಎಂದರು. ಈ ಹಿನ್ನೆಲೆಯಲ್ಲಿ ಒಟ್ಟು 3.50 ಕೋಟಿ ರೂಪಾಯಿಯಲ್ಲಿ ನೂತನ ರೀತಿ ತಡೆಗೋಡೆ ನಿರ್ಮಿಸಲಾಗುವದು ಎಂದು ಅನೀಸ್ ಕಣ್ಮಣಿ ಜಾಯ್ ಈ ಬಾರಿ ಮಳೆ ಪರಿಹಾರ ನಿಧಿಯಡಿ ಆರ್ಥಿಕ ವ್ಯವಸ್ಥೆ ಹೊಂದಿಸಲಾಗುವದು ಎಂದರು.