ಮಡಿಕೇರಿ, ಸೆ. 20: ಮಡಿಕೇರಿ ನಗರಸಭಾ ಕಾರ್ಯಾಲಯ ಸಂಕೀರ್ಣದಲ್ಲಿ ಗಣಹೋಮ ದೊಂದಿಗೆ; ವಿಶೇಷ ಪೂಜೆ ಸಲ್ಲಿಸುವ ಮೂಲಕ, ದಸರಾ ಸಮಿತಿ ಕಾರ್ಯಾಲಯದ ಚಟುವಟಿಕೆ ಆರಂಭಗೊಂಡಿತು.

ನಗರದ ಶ್ರೀ ವಿಜಯ ವಿನಾಯಕ ದೇವಾಲಯದ ಅರ್ಚಕ ಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ದೇವತಾ ಕೈಂಕರ್ಯ ನೆರವೇರಿತು. ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಅವರುಗಳು ಪಾಲ್ಗೊಂಡು ಶುಭ ಕೋರಿದರು.

ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ, ಪದಾಧಿಕಾರಿಗಳಾದ ಬಿ.ಕೆ. ಜಗದೀಶ್, ಉಮೇಶ್ ಸುಬ್ರಮಣಿ, ನೆರವಂಡ ಜೀವನ್, ಬಿ.ಎಂ. ಹರೀಶ್, ಆರ್.ಬಿ. ರವಿ, ರಾಜೇಂದ್ರ, ಮಹೇಶ್ ಜೈನಿ, ಬಿ.ಕೆ. ಅರುಣ್, ಪ್ರಕಾಶ್ ಆಚಾರ್ಯ ಸೇರಿದಂತೆ ಇತರರು ಪಾಲ್ಗೊಂಡಿದ್ದರು.