ವೀರಾಜಪೇಟೆ, ಸೆ. 16: ನಟಿ ಹರ್ಷಿಕಾ ಪೂಣಚ್ಚ ಅವರ ತಂದೆ ಉದ್ದಪಂಡ ಪೂಣಚ್ಚ (68 ) ಅವರು ಇಂದು ಬೆಳಿಗ್ಗೆ ನಿಧನರಾದರು. ಮೃತ ಪೂಣಚ್ಚ ಅವರಿಗೆ ಸಣ್ಣ ಕರುಳಿನ ಸಮಸ್ಯೆ ಇದ್ದು ಆಹಾರ ಸೇವನೆಗೆ ತೊಂದರೆಯಾಗುತ್ತಿತ್ತು. ಅವರಿಗೆ ಇತ್ತೀಚೆಗೆ ಮಣಿಪಾಲ ಆಸ್ವತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯೂ ನಡೆದಿತ್ತು. ಕೊನೆಗೂ ಆರೋಗ್ಯ ಸುಧಾರಿಸದೆ ಇಂದು ಬೆಳಿಗ್ಗೆ 8.30ಕ್ಕೆ ನಿಧನ ಹೊಂದಿದರು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ಮೃತರು ಮಗಳು ಹರ್ಷಿಕಾ ಹಾಗೂ ಪತ್ನಿ ಶಾಂಭವಿ ಅವರನ್ನು ಅಗಲಿದ್ದಾರೆ.